Home ಸುದ್ಧಿಗಳು ಪ್ರಾದೇಶಿಕ ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾದ ಮೊದಲ ಕರಾವಳಿಯ ಯುವತಿ ಸುರೈಯ್ಯ ಅಂಜುಮ್

ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾದ ಮೊದಲ ಕರಾವಳಿಯ ಯುವತಿ ಸುರೈಯ್ಯ ಅಂಜುಮ್

520
0

ಉಡುಪಿ: ರಾಷ್ಟ್ರೀಯ ಮಟ್ಟದ “ಯಂಗ್ ಇಂಡಿಯಾ ಕೇ ಬೋಲ್” ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದ ವಕ್ತಾರರ ಆಯ್ಕೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶವ್ಯಾಪ್ತಿ 15,000 ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ದೇಶದಾದ್ಯಂತ 300 ಯುವ ಕಾಂಗ್ರೆಸ್ ವಕ್ತಾರರು ನವದೆಹಲಿಯ ಯುವ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದರು. ಕರ್ನಾಟಕ ರಾಜ್ಯದ ಹತ್ತು ವಾಗ್ಮಿಗಳು ದೆಹಲಿಯ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆಯಾದ ಪತ್ರಕರ್ತೆ ಸುರೈಯ್ಯ ಅಂಜುಮ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ರಾಜ್ಯ ಮಟ್ಟದ 180 ಸ್ಪರ್ಧಿಗಳಲ್ಲಿ ಆಯ್ಕೆಯಾಗಿ ರಾಷ್ಟ್ರೀಯ ಮಟ್ಟದ 300 ವಾಗ್ಮಿಗಳಲ್ಲಿ ಅತ್ಯುತ್ತಮ 30 ಸ್ಪರ್ಧಿಗಳಲ್ಲಿ‌ ಕೊನೆಯ ಸುತ್ತಿನಲ್ಲಿ ಆಯ್ಕೆಯಾಗಿ ಅಂತಿಮ ಹಂತದಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರೀಯ ಯುವ ವಾಗ್ಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಇವರು ಉಡುಪಿ ಹಾಗೂ ಕರಾವಳಿಯ ಮೊದಲ ಯುವ ಕಾಂಗ್ರೆಸ್ ನ ಮಹಿಳಾ ವಕ್ತಾರೆಯಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೆಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.