Home ಸುದ್ಧಿಗಳು ಪ್ರಾದೇಶಿಕ ಕಾಲೇಜು ಶಿಕ್ಷಣ ಆಯುಕ್ತಾಲಯದ ಹೆಚ್ಚುವರಿ ನಿರ್ದೇಶಕರಾಗಿ ರಾಜಶೇಖರ ಹೆಬ್ಬಾರ್ ಸಿ ನೇಮಕ

ಕಾಲೇಜು ಶಿಕ್ಷಣ ಆಯುಕ್ತಾಲಯದ ಹೆಚ್ಚುವರಿ ನಿರ್ದೇಶಕರಾಗಿ ರಾಜಶೇಖರ ಹೆಬ್ಬಾರ್ ಸಿ ನೇಮಕ

3205
0

ಮಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗದ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ ಕರ್ತವ್ಯನಿರ್ವಹಿಸುತ್ತಿದ್ದ ರಾಜಶೇಖರ ಹೆಬ್ಬಾರ್ ಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಲೇಜು ಶಿಕ್ಷಣ ಆಯುಕ್ತಾಲಯದ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜಶೇಖರ ಹೆಬ್ಬಾರ್ ಸಿ ಅವರು ಈ ಹಿಂದೆ ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನೂತನ ಜವಾಬ್ದಾರಿ ವಹಿಸಿಕೊಂಡ ರಾಜಶೇಖರ ಹೆಬ್ಬಾರ್ ಸಿ ಅವರನ್ನು ಡಾ. ಪಿ. ದಯಾನಂದ ಪೈ-ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಡಿ. ವೇದವ್ಯಾಸ ಕಾಮತ್, ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ., ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಬೋಧಕ ಬೋಧಕೇತರರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.