Home ಸುದ್ಧಿಗಳು ಪ್ರಾದೇಶಿಕ ಬೈಂದೂರು- ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ

ಬೈಂದೂರು- ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ

400
0

ಉಡುಪಿ: ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಬೀಸಿನಪಾರೆ ನಿವಾಸಿ ಸಾಜು ಕೆ.ಎಂ (47) ಎಂಬ ವ್ಯಕ್ತಿಯು ಜುಲೈ 31 ರಂದು ಬೆಳಗ್ಗೆ 8.45 ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 6 ಇಂಚು ಎತ್ತರ, ಸಪೂರ ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ತುಳು ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ9480805434, ಕಂಟ್ರೋಲ್ ರೂಂ: 100, ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.