Home ಸುದ್ಧಿಗಳು ಪ್ರಾದೇಶಿಕ ಮಂಗಳೂರು-ಹೊಸದುರ್ಗ: ವೋಲ್ವೋ ಸಾರಿಗೆ ಕಾರ್ಯಾಚರಣೆ

ಮಂಗಳೂರು-ಹೊಸದುರ್ಗ: ವೋಲ್ವೋ ಸಾರಿಗೆ ಕಾರ್ಯಾಚರಣೆ

355
0

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು-ಹೊಸದುರ್ಗ ಮಾರ್ಗದಲ್ಲಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ.

ಸಾರಿಗೆಯು ಮಂಗಳೂರಿನಿಂದ ರಾತ್ರಿ 9.30 ಕ್ಕೆ ಹೊರಟು ಸುರತ್ಕಲ್-ಪಡುಬಿದ್ರೆ-ಉಡುಪಿ-ಮಣಿಪಾಲ-ಕುಂದಾಪುರ-ಅಂಪಾರು-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗ-ಹೊಳೆಹೊನ್ನೂರು- ಚೆನ್ನಗಿರಿ-ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ಬೆಳಗ್ಗೆ 5.45 ಕ್ಕೆ ಹಾಗೂ ಮರುಪ್ರಯಾಣದಲ್ಲಿ ಹೊಸದುರ್ಗದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 6.15 ಕ್ಕೆ ಮಂಗಳೂರನ್ನು ತಲಪುತ್ತದೆ.

ಸದರಿ ಸಾರಿಗೆಯಲ್ಲಿ ಮಂಗಳೂರಿನಿಂದ ಹೊಸದುರ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 700 ರೂ. ನಿಗಧಿಪಡಿಸಲಾಗಿದ್ದು, ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ksrtc.karnataka.gov.in ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಹಾಗೂ ಮಂಗಳೂರು ಬಸ್ ನಿಲ್ದಾಣ ಮೊ.ನಂ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ : ಮೊ.ನಂ: 9663211553, ಉಡುಪಿ ಬಸ್ ನಿಲ್ದಾಣ ಮೊ.ನಂ: 9663266400, ಡಾ. ವಿ.ಎಸ್.ಆಚಾರ್ಯ ಬಸ್ ನಿಲ್ದಾಣ ಮೊ.ನಂ 7795984182 ಹಾಗೂ ಕುಂದಾಪುರ ಬಸ್ ನಿಲ್ದಾಣ ಮೊ.ನಂ :9663266009 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.