ಉಡುಪಿ, ಅ. 28: 2026-27 ಸಾಲಿನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯಕಾರಿ ಸಮಿತಿ ಸಭೆ ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ ನಡೆಯಿತು. ಅಧ್ಯಕ್ಷರಾದ ಮಟ್ಟಾರ್ ವಸಂತ್ ಕಿಣಿಯವರ ನೇತೃತ್ವದಲ್ಲಿ ಸಂಘದ ವಿಷಯಗಳನ್ನು ಚರ್ಚಿಸಲಾಯಿತು. ಮಾಜಿ ಅಧ್ಯಕ್ಷರಾದ ಹರೀಶ್ ಕುಂದರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. 35 ವರ್ಷದಿಂದ ಸೇವೆ ಸಲ್ಲಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ಸೀತಾರಾಮ್ ಶೆಟ್ಟಿ ಅವರಿಗೂ ಕೂಡ ಗೌರವಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಭಟ್, ಚಿತ್ತರಂಜನ್ ಭಟ್, ಪ್ರಶಾಂತ್ ಬಾಳಿಗಾ, ಗಣೇಶ್ ಕಿಣಿ, ಜಾನ್ ಆರ್ ಡಿ ಸಿಲ್ವ, ಹರೀಶ್ ಕುಂದರ್, ಅಧ್ಯಕ್ಷ ವಸಂತ್ ಕಿಣಿ, ಉಪಾಧ್ಯಕ್ಷ ವಲ್ಲಭ ಭಟ್, ಹೃಷಿಕೇಶ್ ಹೆಗ್ಡೆ, ಕೃಷ್ಣ ಪ್ರಸಾದ್ ಶೆಟ್ಟಿ ಕಾರ್ಯದರ್ಶಿ ರಂಜನ್ ಕಲ್ಕೂರ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




By
ForthFocus™