Wednesday, July 22, 2026
Wednesday, July 22, 2026

ಕ್ರಿಯೇಟಿವ್ ಪುಸ್ತಕ ಧಾರೆ- 2026: ಪತ್ರಕರ್ತ ಅಜಿತ್ ಹನುಮಕ್ಕನವರ್ ಭಾಗಿ

ಕ್ರಿಯೇಟಿವ್ ಪುಸ್ತಕ ಧಾರೆ- 2026: ಪತ್ರಕರ್ತ ಅಜಿತ್ ಹನುಮಕ್ಕನವರ್ ಭಾಗಿ

Date:

ಕಾರ್ಕಳ, ಜು.19: ಸಾಹಿತ್ಯ, ಓದು, ಯುವ ಮನಸುಗಳನ್ನು ಪುಸ್ತಕದೆಡೆಗೆ ಸೆಳೆಯಬೇಕೆನ್ನುವ ಸದುದ್ದೇಶದಿಂದ ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪುಸ್ತಕ ಮನೆ ವತಿಯಿಂದ ಕ್ರಿಯೇಟಿವ್ ಪುಸ್ತಕ ಧಾರೆ 2026 ಮೂರನೆಯ ಆವೃತ್ತಿಯ ಕಾರ್ಯಕ್ರಮ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಸಂಪನ್ನಗೊಂಡಿತ್ತು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಕಿರಿಯ ಬರಹಗಾರರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಡುವುದು ಮತ್ತು ಹಿರಿಯ ಪ್ರಭುತ್ವ ಬರಹಗಾರರ ಬರಹಗಳನ್ನು ಪ್ರಕಟಿಸುವ ಧ್ಯೇಯವನ್ನು ಇಟ್ಟುಕೊಂಡು ಯುವ ಮನಸುಗಳಲ್ಲಿ ಓದುವ ಅಭಿರುಚಿ ಬೆಳೆಸುವುದು ಪುಸ್ತಕಧಾರೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಲ್ಲಿಯವರೆಗೆ ಒಟ್ಟು ಪುಸ್ತಕ ಮನೆಯ ವತಿಯಿಂದ 104 ಕೃತಿಗಳು ಪ್ರಕಟಗೊಂಡಿವೆ ಎಂದು ಪುಸ್ತಕ ಮನೆ ನಡೆದು ಬಂದ ಹಾದಿಯನ್ನು ವಿವರಿಸುತ್ತಾ ಸರ್ವರನ್ನು ಉದ್ದೇಶಿಸಿ ಸ್ವಾಗತಿಸಿದರು.

ನಾಡಿನ ಖ್ಯಾತ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ವ್ಯಕ್ತಿಯಲ್ಲಿ ಮಾತನಾಡುವ ವಿಷಯಗಳು ಮತ್ತು ಅವನು ವ್ಯಕ್ತಪಡಿಸುವ ಶಬ್ದ ಭಂಡಾರವಿದ್ದಾಗ ಮಾತ್ರ ಆತ್ಮವಿಶ್ವಾಸ ಬರುವುದು ಆ ಆತ್ಮವಿಶ್ವಾಸವನ್ನು ನೀಡುವ ಕೆಲಸ ಪುಸ್ತಕಗಳಿಂದ ಸಾಧ್ಯವಾಗುತ್ತದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಹೇಳುವುದೇ ಶಿಕ್ಷಣ ಎಂದು ತಿಳಿಸಿದರು.

ಪುಸ್ತಕ ಮನೆ ವತಿಯಿಂದ 25 ಕೃತಿಗಳು ಲೋಕಾರ್ಪಣೆ: ಪುಸ್ತಕಧಾರೆ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಬರಹಗಾರರಿಂದ ರಚಿತವಾದ ಸುಮಾರು 25 ಕೃತಿಗಳು ಲೋಕಾರ್ಪಣೆಗೊಂಡವು, ಹೊಸ ಪಟ್ಟಣ, ಖ್ಯಾತ ಶಿಕ್ಷಣ ಸಿದ್ದಾಂತಿಗಳು, ಪೀಯೂಷಾಬ್ರುತಮೃತ, ಸುಭಾಷಿತ ಸಾಗರ, ಬದುಕಿನ ಕನ್ನಡಿಯಲ್ಲಿ, ಭಾವಮುದ್ರೆ,ದೇವಯಾನ, ತರ್ಕಕ್ಕೆ ನಿಲುಕದ್ದು, ಸಮುದ್ರ ಮಾತಾಡಿತು, ನಿತ್ಯದ ನೋಟಗಳಿಗೆ ನಿರುತ್ತರ, ಅಪ್ಪನ ಅಂಗಡಿ, ಚಿಗುರು ಚಿಗುಟಿದ ಪೇಸ್ಬುಕ್, ಗೆಲುವಿನ ದಾರಿ, ನದಿಯಂಚಿನ ನಡಿಗೆ, ಚಂದನವ ಕಡಿದು ತೇದೊಡೆ , ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು, ಮೌನ ಈ ಮಳೆಬಿಲ್ಲು, ನಂಬಿಕೆ, ಗೆಲುವಿನ ಏಣಿ, ಅಂತರಂಗ ಯಾನ, ಮೌಲ್ಯದರಿವಿನ ಹೊಂಬೆಳಕು, ನೀಲಿ, ಒಲವೇ ಹಾಡಾಗಿದೆ, ಸಾಹಿತ್ಯ ವಿಸ್ಮಯ ಮತ್ತು ರಣರಂಗ ಪುಸ್ತಕಗಳು ಲೋಕಾರ್ಪಣೆಗೊಂಡವು.

ಶಶಿಧರ್ ಹಾಲಾಡಿಯವರ ನದಿ ದಾಟಿ ಬಂದವರು ಪುಸ್ತಕಕ್ಕೆ ಉತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಡಾ. ಧನಂಜಯ್ ಕುಂಬ್ಳೆ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಆದರ್ಶ ಎಂ. ಕೆ. ಡಾ. ಗಣನಾಥ ಶೆಟ್ಟಿ, ಗಣಪತಿ ಭಟ್ ಕೆ .ಎಸ್. ವಿಮಲ್ ರಾಜ್, ಅಮೃತ್ ಯು ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಹಿತ್ ಎಸ್ ಕೆ ನಡೆಸಿಕೊಟ್ಟರು. ಶಾಸಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಸಂವಾದ: ಯುವಶಕ್ತಿ ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು ಎಂಬ ವಿಷಯದ ಕುರಿತು ಅಜಿತ್ ಹನುಮಕ್ಕನವರ್ ರೊಂದಿಗೆ ಶ್ರೀ ಅವಿನಾಶ್ ಕಾಮತ್ ಸಂವಾದವನು ನಡೆಸಿಕೊಟ್ಟರು.

ಭಾವ ನಮನ: ಕನ್ನಡದ ಕವಿ ಶ್ರೇಷ್ಠರ ಅಮರ ಗೀತೆಗಳ ಸಂಗೀತ ಯಾನ ಭಾವ ನಮನ ಕಾರ್ಯಕ್ರಮವು ನಾಡಿನ ಹೆಸರಾಂತ ಗಾಯಕರಿಂದ ನಡೆಯಿತು. ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಕಳದ ಸಾಹಿತ್ಯ ಅಭಿಮಾನಿಗಳು, ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೊಮ್ಮರಬೆಟ್ಟು: ಗ್ರಾಮಸ್ಥರ ಅಹವಾಲು ಸ್ವೀಕಾರ

ಕಾಪು, ಜು.21: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ರಿಕ್ಷಾ ಚಾಲಕರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ವಿಶೇಷ ಆದ್ಯತೆ: ಯಶ್ಪಾಲ್ ಸುವರ್ಣ

ಬ್ರಹ್ಮಾವರ, ಜು.21: ಸಾರ್ವಜನಿಕರ ಸಾರಿಗೆ ವ್ಯವಸ್ಥೆಯಲ್ಲಿ ವಿಶೇಷ ಪಾತ್ರವಹಿಸುವ ರಿಕ್ಷಾ ಚಾಲಕರ...

ಬಡಾ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಕಾಪು, ಜು.21: ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ...

ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ಸಾಧನೆಗೆ ಸ್ಪೂರ್ತಿ: ಡಾ.ಸುಧಾಕರ ಶೆಟ್ಟಿ

ಮಣಿಪಾಲ, ಜು.21: ಕ್ರೀಡಾ ದಾಖಲೆಗಳ ಮಾಹಿತಿ ಹಾಗೂ ತರಬೇತಿ ವಿದ್ಯಾರ್ಥಿಗಳ ಸಾಧನೆಗೆ...
error: Content is protected !!