Tuesday, September 29, 2026
Tuesday, September 29, 2026

ಮಕ್ಕಳಲ್ಲಿ ಪರಿಸರ ಜಾಗೃತಿ ಶ್ಲಾಘನೀಯ: ರಾಜೇಶ್ ಗಾಣಿಗ ಅಚ್ಲಾಡಿ

ಮಕ್ಕಳಲ್ಲಿ ಪರಿಸರ ಜಾಗೃತಿ ಶ್ಲಾಘನೀಯ: ರಾಜೇಶ್ ಗಾಣಿಗ ಅಚ್ಲಾಡಿ

Date:

ಕೋಟ, ಜು.12: ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಮುಂದಿನ ತಲೆಮಾರಿಗೆ ನೈಜ ಪರಿಸರ ಪ್ರೇಮ ಬಿತ್ತುವ ಪಂಚವರ್ಣದ ಕಾರ್ಯ ಶ್ಲಾಘನೀಯ ಎಂದು ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಹೇಳಿದರು.

ಕಾರ್ಕಡ ಪರಿಸರದಲ್ಲಿ ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 309ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ ಇವರ ಸಹಯೋಗದೊಂದಿಗೆ ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ, ಗೆಳೆಯರ ಬಳಗ ಕಾರ್ಕಡ ಇವರ ಸಂಯೋಜನೆಯೊಂದಿಗೆ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನೆ ಮನೆಗೆ ಪಾರಿಜಾತ, ಲಕ್ಷ್ಮಣಫಲ ಅಭಿಯಾನಕ್ಕೆ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಗಿಡ ನಡುವ ಮೂಲಕ ಚಾಲನೆ ನೀಡಿದರು. ಪಂಚವರ್ಣದ ಮಹೇಶ್ ಬೆಳಗಾವಿ ಹಸಿರು ಹೆಜ್ಜೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕೊಲ್ಲೂರು ದೇಗುಲದ ಮಾಜಿ ಟ್ರಸ್ಟಿ ಕೆ.ಪಿ ಶೇಖರ್, ನ್ಯೂ ಕಾರ್ಕಡ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು, ಕಾರ್ಕಡ ಗೆಳೆಯರ ಬಳಗದ ನಾಗರಾಜ್ ಉಪಾಧ್ಯಾ, ಶ್ರೀಕಾಂತ್ ಐತಾಳ್, ತಮ್ಮಯ್ಯ, ಶಶಿಧರ ಮಯ್ಯ ಉಪಸ್ಥಿತರಿದ್ದರು. ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ.ಮಿಥುನ್ ಯು: ಆಂತರಿಕ ಗುಣಮಟ್ಟ ಭರವಸೆ ಕೋಶದ ಸದಸ್ಯರಾಗಿ ಆಯ್ಕೆ

ಉಡುಪಿ, ಸೆ.29: ಮಂಗಳೂರಿನ ಪ್ರತಿಷ್ಠಿತ ಎ. ಜೆ. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ...

ರಾಷ್ಟ್ರೀಯ ಲೋಕ್ ಅದಾಲತ್: ಒಂದೇ ದಿನದಲ್ಲಿ ಒಟ್ಟು 61,367 ಪ್ರಕರಣ ಇತ್ಯರ್ಥ

ಉಡುಪಿ, ಸೆ.28: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ...

ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ: ಸಿ.ಇ.ಓ ಪ್ರತೀಕ್ ಬಾಯಲ್

ಉಡುಪಿ, ಸೆ.28: ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳ...

ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣಾ ಸಮಾರಂಭ ಸಮಾರೋಪ

ಉಡುಪಿ, ಸೆ.28: ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ...
error: Content is protected !!