Monday, October 19, 2026
Monday, October 19, 2026

ರೋಟರಿ ಪದಗ್ರಹಣ

ರೋಟರಿ ಪದಗ್ರಹಣ

Date:

ಉಡುಪಿ, ಜು.6: ಉಡುಪಿ, ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರೋಟರಿ ಉಡುಪಿ ಕ್ಲಬ್‌ನ ಪದಗ್ರಹಣ ಸಮಾರಂಭ ನಡೆಯಿತು. ರೋಟರಿ ಉಡುಪಿಯ ನೂತನ ಅಧ್ಯಕ್ಷರಾದ ಜೆ. ಗೋಪಾಲಕೃಷ್ಣ ಪ್ರಭು ಹಾಗೂ ನೂತನ ಕಾರ್ಯದರ್ಶಿಯಾದ ಗಣಪತಿ ಪ್ರಭು ಅವರನ್ನು ಪದಗ್ರಹಣ ಅಧಿಕಾರಿ ಪಿ ಎಚ್ ಎಸ್ ಎಮ್ ಅಲೆನ್ ವಿನಯ್ ಲೂಯಿಸ್, ಡಿ ಜಿ ಎನ್ ಅವರು ಪದಗ್ರಹಣ ಮಾಡಿಸಿದರು.

ನಿರ್ಗಮಿತ ಏ ಜಿ ರೊಟೇರಿಯನ್ ಪಿ ಎಚ್ ಎಸ್ ಎಮ್ ಅಮಿತ್ ಅರವಿಂದ್, ನಿರ್ಗಮಿತ ಝಡ್ ಎಲ್ ಜನಾರ್ಧನ್ ಭಟ್, ಸೂರಜ್ ಕುಮಾರ್ ವೈ, ಅಶೋಕ್ ಕೋಟ್ಯಾನ್ ಹಾಗೂ ಮೇಜರ್ ಡೋನರ್ ಹೇಮಂತ್ ಯು. ಕಾಂತ್ ಅವರನ್ನು ಸನ್ಮಾನಿಸಲಾಯಿತು.

ಈ ದಿನ 3 ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು ಹಾಗೂ ಒಬ್ಬ ನಿರೀಕ್ಷಿತ ಹೊಸ ಸದಸ್ಯರನ್ನು ಪರಿಚಯಿಸಿ ಗುರುತಿಸಲಾಯಿತು.

ಕ್ಲಬ್ ಹೌಸ್ ಬುಲೆಟಿನ್ ಕೋಂಚ್ ಅನ್ನು ಬಿಡುಗಡೆ ಮಾಡಲಾಯಿತು. 8 ಇಂಟರಾಕ್ಟ್ ಶಾಲೆಗಳ 10 ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 9 ವಿದ್ಯಾರ್ಥಿಗಳಿಗೆ ಸಹಾಯ ಧನ ಚೆಕ್‌ಗಳನ್ನು ವಿತರಿಸುವ ಮೂಲಕ ಹಾಗೂ ಶ್ರೀಕೃಷ್ಣ ವೃದ್ಧಾಶ್ರಮಕ್ಕೆ ಒಂದು ಮಂಚವನ್ನು ಹಸ್ತಾಂತರಿಸಲಾಯಿತು.

ಪದಗ್ರಹಣ ಅಧಿಕಾರಿ ಅಲೆನ್ ವಿನಯ್ ಲೂಯಿಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹೊಸ ತಂಡಕ್ಕೆ ಶುಭವನ್ನು ಹಾರೈಸಿದರು. ಗಣಪತಿ ಪ್ರಭು ಅವರು ವಂದನಾರ್ಪಣೆ ಸಲ್ಲಿಸಿದರು. ರಾಮಚಂದ್ರ ಉಪಾಧ್ಯಾಯ ಮತ್ತು ವಿದ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!