Sunday, March 29, 2026
Sunday, March 29, 2026

ಶ್ರೀಕೃಷ್ಣ ಬಾಲನಿಕೇತನದಲ್ಲಿ ರಾಮನವಮಿ ಆಚರಣೆ

ಶ್ರೀಕೃಷ್ಣ ಬಾಲನಿಕೇತನದಲ್ಲಿ ರಾಮನವಮಿ ಆಚರಣೆ

Date:

ಉಡುಪಿ, ಮಾ.27: ಶ್ರೀ ವಿಶ್ವಪ್ರಸನ್ನತೀರ್ಥರ ಆಶೀರ್ವಾದದೊಂದಿಗೆ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ರಾಮನವಮಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಬಾಲನಿಕೇತನದ ಮಕ್ಕಳು ಭಜನೆ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸ ಮತ್ತು ರಾಮನಾಮ ಜಪ ಮಾಡಿದರು. ನಂತರ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮತ್ತು ಸ್ವಾಯತ್ತ ಕಾಲೇಜಿನ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಡಾ. ಟಿ.ಎಸ್. ರಮೇಶ್ ಅವರು ರಾಮಾಯಣದ ಬಗ್ಗೆ ಮತ್ತು ರಾಮನ ಆದರ್ಶ ಗುಣಗಳ ಬಗ್ಗೆ ಪ್ರವಚನ ನೀಡಿದರು. ಬಾಲನಿಕೇತನದ ಆಡಳಿತ ಮಂಡಳಿ ಸದಸ್ಯರು, ರೋಟರಿ ಸದಸ್ಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು. ರಾಮದೇವರ ಪೂಜೆ ಮತ್ತು ಫಲಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ನವದೆಹಲಿ, ಮಾ.28: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾದ ಜೇವರ್‌ನಲ್ಲಿ...

ಮಲಬಾರ್ ವಿಶ್ವರಂಗ ಪುರಸ್ಕಾರ

ಉಡುಪಿ, ಮಾ.28: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್...

ಇಂಧನ ಬೆಲೆ ಏರಿಕೆ ಇಲ್ಲ; ಲಾಕ್‌ಡೌನ್ ವದಂತಿಗಳನ್ನು ತಳ್ಳಿ ಹಾಕಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ, ಮಾ.27: ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್)...
error: Content is protected !!