Saturday, March 21, 2026
Saturday, March 21, 2026

ಮೂಡುತೋನ್ಸೆ ಗರಡಿಹಿತ್ಲು ರಸ್ತೆ ಲೋಕಾರ್ಪಣೆ

ಮೂಡುತೋನ್ಸೆ ಗರಡಿಹಿತ್ಲು ರಸ್ತೆ ಲೋಕಾರ್ಪಣೆ

Date:

ಉಡುಪಿ, ಮಾ;.21: ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುತೋನ್ಸೆ ಗರಡಿಹಿತ್ಲು ಸಂಪರ್ಕ ರಸ್ತೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮೂಡುತೋನ್ಸೆ ಗರಡಿಹಿತ್ಲು ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಗೆ 25 ಲಕ್ಷ ಅನುದಾನ ಒದಗಿಸಿ ಇದೀಗ ರಸ್ತೆ ಲೋಕಾರ್ಪಣೆಗೊಂಡಿದೆ. ಈ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ತೋನ್ಸೆ ವಲಯ ಬಂಟರ ಸಂಘದ ನೂತನ ಬಂಟರ ಭವನಕ್ಕೆ ಆಗಮಿಸುವ ಸಾರ್ವಜನಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಕಲ್ಯಾಣಪುರ ಗ್ರಾಮದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿವಹಿಸುದಾಗಿ ಹೇಳಿದರು.

ತೋನ್ಸೆ ವಲಯ ನಾಡವರ ಸಂಘದ ಅಧ್ಯಕ್ಷರಾದ ಮನೋಹರ ಶೆಟ್ಟಿ ತೋನ್ಸೆ ಮಾತನಾಡಿ, ನಮ್ಮ ಬೇಡಿಕೆಗೆ ಅತ್ಯಂತ ಶೀಘ್ರವಾಗಿ ಸ್ಪಂದಿಸಿ ಗರಡಿಹಿತ್ಲು ಭಾಗಕ್ಕೆ ರಸ್ತೆ ನಿರ್ಮಿಸಿ ವಿಶೇಷ ಸಹಕಾರ ನೀಡಿದ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ಊರಿನ ಜನತೆ ಹಾಗೂ ಬಂಟರ ಸಂಘದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ತೋನ್ಸೆ ವಲಯ ನಾಡವರ ಸಂಘದ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೆಮ್ಮಣ್ಣು, ಕೋಶಾಧಿಕಾರಿ ದಿನಕರ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಶೆಟ್ಟಿ, ಮೂಡುತೋನ್ಸೆ ಕೂರಾಡಿ ಮನೆ ವಿಶ್ವನಾಥ್ ಶೆಟ್ಟಿ ಮುಂಬೈ, ಸದಾಶಿವ ಶೆಟ್ಟಿ ಗರಡಿಹಿತ್ಲು, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರಾಜ್, ಸತೀಶ್ ನಾಯ್ಕ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರಶಾಂತ್ ಆಚಾರ್, ಅನಿತಾ ನಾಯ್ಕ್, ಕವಿತಾ ಮೇಸ್ತ, ಸುಧೀರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾ. 24, ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಮಾ.21: ಮೆಸ್ಕಾಂ ಕಾಪು ಉಪವಿಭಾಗ ಕಛೇರಿಯಲ್ಲಿ ಮಾರ್ಚ್ 24 ರಂದು...

ಪ್ರಸಾದ ಎಸಳು ಚರ್ಚಾಗೋಷ್ಠಿ

ಮಂಗಳೂರು, ಮಾ.21: ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ 'ಪ್ರಸಾದ ಎಸಳು'...

ಸರಕಾರಿ ಯೋಜನೆಗಳು ಫಲಾನುಭವಿಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಮಾ.21: 2025–26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ...

ಮ್ಯಾಜಿಕ್ ಜಾರ್

ನಾವೆಲ್ಲ ದಿನಾಲು ಅನೇಕ ಋಣಾತ್ಮಕ ಭಾವನೆಗಳಿಂದ ತೋಲಾಡುತ್ತಿರುತ್ತೇವೆ. ಭಾರವಾದ ಮನಸ್ಸು, ಕೆಲಸದಲ್ಲಿ...
error: Content is protected !!