Friday, March 20, 2026
Friday, March 20, 2026

ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಯಾರಂಭ

ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾರ್ಯಾರಂಭ

Date:

ಅಜೆಕಾರ್, ಮಾ.20: ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ (ರಿ) ಇದರ ಐದನೇ ಅಂಗಸಂಸ್ಥೆ ಅಜೆಕಾರ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪದ್ಮನಗರ, ಅಜೆಕಾರು. ಇದು 2026-27ನೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲು ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರದಿಂದ ಅನುಮೋದನೆಯನ್ನು ಪಡೆದಿರುತ್ತದೆ. ಅಜೆಕಾರಿನ ಪದ್ಮನಗರದಲ್ಲಿ ಟ್ರಸ್ಟ್ನ 4ನೇ ಕ್ಯಾಂಪಸ್ ನಿರ್ಮಾಣಗೊಂಡಿದ್ದು, ಟ್ರಸ್ಟಿನ ಸಮಾಜಸೇವಾ ಮತ್ತು ಶೈಕ್ಷಣಿಕ ಕಾಳಜಿಯ ಭಾಗವಾಗಿ ಅಜೆಕಾರಿನ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಉಚಿತ ಶಿಕ್ಷಣವನ್ನು ನೀಡುವುದಾಗಿ ನಿರ್ಧರಿಸಿರುತ್ತದೆ.

ಟ್ರಸ್ಟ್ ಕಳೆದ 15 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದರೊಂದಿಗೆ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನಗಳನ್ನು ನೀಡುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಪ್ರಸ್ತುತ ಎಂಟನೇ ತರಗತಿ ಪೂರ್ಣಗೊಳಿಸಿ 9ನೇ ತರಗತಿಗೆ ಅಜೆಕಾರ್ ಜ್ಞಾನಸುಧಾ ಸಂಸ್ಥೆಯಲ್ಲಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಎಂಟನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಪೋಷಕರೊಂದಿಗೆ ಶಾಲಾ ಕಛೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ. ದಿನಾಂಕ 30.04.2026 ರ ಒಳಗೆ ಶಾಲಾ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕ ಸಂಖ್ಯೆ: 7992920707

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ: ನಿಟ್ಟೆ ತಂಡಕ್ಕೆ ಪ್ರಶಸ್ತಿ

ನಿಟ್ಟೆ, ಮಾ.20: ಎಜೆ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇತ್ತೀಚೆಗೆ...

ಇನ್ಸ್ಪಾಯರ್ ಅವಾರ್ಡ್: ಸಂಜಿತ್ ಎಂ ದೇವಾಡಿಗ ಆಯ್ಕೆ

ಗಂಗೊಳ್ಳಿ, ಮಾ.20: ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಸೃಜನಶೀಲತೆ ಮತ್ತು ನವೀನ ಆಲೋಚನೆಗಳನ್ನು...

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...
error: Content is protected !!