Saturday, March 14, 2026
Saturday, March 14, 2026

ಕಾರಂತರ ಕಾದಂಬರಿಗಳು ಚಾರಿತ್ರಿಕ ದಾಖಲೆಗಳು: ಡಾ.ವಿದ್ಯಾಲತಾ

ಕಾರಂತರ ಕಾದಂಬರಿಗಳು ಚಾರಿತ್ರಿಕ ದಾಖಲೆಗಳು: ಡಾ.ವಿದ್ಯಾಲತಾ

Date:

ಉಡುಪಿ, ಮಾ.13: ಡಾ.ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕರಾವಳಿಯ ಬದುಕನ್ನು ಚಿತ್ರಿಸಿದ್ದಾರೆ. ಇಲ್ಲಿಯ ಬದುಕಿನ ಜಾತಿ ವ್ಯವಸ್ಥೆ ಲಿಂಗ ಅಸಮಾನತೆ ಮತ್ತು ಪ್ರಕೃತಿ ಮನುಷ್ಯನ ಸಂಬಂಧದ ಚಿತ್ರಣಗಳಿವೆ ಈ ದೃಷ್ಟಿಯಿಂದ ಅವರ ಕಾದಂಬರಿಗಳು ಕರಾವಳಿ ಬದುಕಿನ ಚಾರಿತ್ರಿಕ ದಾಖಲೆಗಳಾಗಿವೆ ಇದಕ್ಕೆ ಅವರ ಚೋಮನದುಡಿ ಕಾದಂಬರಿ ಒಳ್ಳೆಯ ಉದಾಹರಣೆ ಎಂದು ಸೈಂಟ್ ಸಿರಿಯನ್ ಕಾಲೇಜು ಬ್ರಹ್ಮಾವರ ಸಹ ಪ್ರಾಧ್ಯಪಕಿ ಡಾ.ವಿದ್ಯಾಲತಾ ಡಿ ಹೇಳಿದರು.

ಅವರು ಮಂಗಳವಾರ ಕೋಟ ಪಡುಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣಾ ಸಪ್ತಾಹ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.

ಆಶಯ ಭಾಷಣ ಮಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಸಂವಿಧಾನಿಕ ಮೌಲ್ಯವನ್ನು ಕಾರಂತರು ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ. ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಯುವ ಸಮೂಹಕ್ಕೆ ಸಂವಿಧಾನಿಕ ಮೌಲ್ಯಗಳನ್ನು ತಲುಪಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.

ಕಾಲೇಜಿನ ಪ್ರಾಧ್ಯಾಪಕ ರಮೇಶ್ ಆಚಾರ್, ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಂಘಟನಾ ಕಾರ್ಯದರ್ಶಿ ಶಾಲಿನಿ ಯು ಬಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ಸ್ವಾಗತಿಸಿ, ಕನ್ನಡ ವಿಭಾಗದ ಸಹ ಪ್ರಾಧ್ಯಪಕ ಡಾ. ಪ್ರಕಾಶ್ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೋಟಲ್ ಉದ್ಯಮಗಳಲ್ಲಿ ಅನಿಲಕ್ಕೆ ಪರ್ಯಾಯವಾಗಿ ಇತರೆ ಉರುವಲುಗಳ ಬಳಕೆ ಮಾಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಕರೆ

ಉಡುಪಿ, ಮಾ.13: ಪಶ್ಚಿಮ ಎಷ್ಯಾ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದಾಗಿ ದೇಶದಲ್ಲಿ ವಾಣಿಜ್ಯ...

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ವಾರ್ಷಿಕ ಜಾತ್ರೆ: ಬದಲಿ ಮಾರ್ಗ

ಉಡುಪಿ, ಮಾ.13: ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ...

ಮಕ್ಕಳ ರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಶಶಿಧರ್ ಕೋಸಂಬೆ ಕರೆ

ಉಡುಪಿ, ಮಾ.13: ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಷಣೆಗೆ ಸರಕಾರ ಜಾರಿಗೆ...

ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ

ಬ್ರಹ್ಮಾವರ, ಮಾ.13: ಅಮೃತ ಉದ್ಯಾನ-2026 ರಾಷ್ಟ್ರಪತಿ ಭವನ ನವದೆಹಲಿಗೆ ಭೇಟಿ ನೀಡಲು...
error: Content is protected !!