Friday, March 13, 2026
Friday, March 13, 2026

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು: ರಕ್ತದಾನ ಶಿಬಿರ

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು: ರಕ್ತದಾನ ಶಿಬಿರ

Date:

ಉಡುಪಿ, ಮಾ.10: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಉಡುಪಿ ಇಲ್ಲಿ ಯೂತ್ ರೆಡ್ ಕ್ರಾಸ್, ಎನ್‌ಎಸ್‌ಎಸ್,ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ, ಕೆ. ಎಂ. ಸಿ ರಕ್ತ ನಿಧಿ ಘಟಕದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ .ವಿವೇಕ್ , ವೈದ್ಯಾಧಿಕಾರಿ,ರಕ್ತ ನಿಧಿ ಘಟಕ, ಕೆಎಂಸಿ ಮಣಿಪಾಲ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಕ್ತದಾನವು ಮಾನವೀಯತೆ ಮತ್ತು ಸಮಾಜ ಸೇವೆಯ ಮಹತ್ವದ ಕಾರ್ಯವಾಗಿದ್ದು, ಯುವಜನತೆ ಈ ರೀತಿಯ ಸೇವಾ ಚಟುವಟಿಕೆಗಳಲ್ಲಿಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು.

ಲಯನ್ಸ್ ಅಧ್ಯಕ್ಷರು ರಘುವೀರ್ ಶೆಟ್ಟಿಗಾರ್ ಲಯನ್ಸ್ ಕ್ಲಬ್ ಹಿರಿಯಡ್ಕ, ಪಿ.ಎಂ.ಜೆ.ಎಫ್ ಹರಿಪ್ರಸಾದ ರೈ ಹಾಗೂ ಎಂಜೆಎಫ್ ಯು. ವಾದಿರಾಜ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ವಹಿಸಿ ಮಾತನಾಡುತ್ತಾ, ರಕ್ತದಾನ ಶಿಬಿರಗಳಂತಹ ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ನಿರೂಪಿಸಿದರು. ತೃತೀಯ ಬಿಸಿಎ ಅನನ್ಯ ಪ್ರಾರ್ಥಿಸಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕ ಸ್ಟಾಲಿನ್ ಡಿಸೋಜಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸನತ್ ಕೋಟ್ಯಾನ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಷ್ಟ್ರಪತಿ ಭವನಕ್ಕೆ ಭೇಟಿಗೆ ಸಂಜೀವಿನಿ ಬುಡಕಟ್ಟು ಮಹಿಳೆಗೆ ಅವಕಾಶ

ಬ್ರಹ್ಮಾವರ, ಮಾ.13: ಅಮೃತ ಉದ್ಯಾನ-2026 ರಾಷ್ಟ್ರಪತಿ ಭವನ ನವದೆಹಲಿಗೆ ಭೇಟಿ ನೀಡಲು...

ಇರಾನ್‌ನಲ್ಲಿ 9000 ಭಾರತೀಯ ಪ್ರಜೆಗಳು: ಸರ್ಕಾರದಿಂದ ಮಾಹಿತಿ

ನವದೆಹಲಿ, ಮಾ.13: ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕಾರ್ಖಾನೆ ಕಾರ್ಮಿಕರು, ಯಾತ್ರಿಕರು, ನಾವಿಕರು ಮತ್ತು...

ಸಂಜೀವಿನಿ ಸ್ವ ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ಬ್ಯಾಂಕರ್ಸ್ ಕಾರ್ಯಾಗಾರ

ಮಣಿಪಾಲ, ಮಾ.12: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-...

ವೀಣಾ ಕಛೇರಿ

ಉಡುಪಿ, ಮಾ.12: ರಂಜನಿ ಮೆಮೋರಿಯಲ್ ಟ್ರಸ್ಟ್ ಮತ್ತು ಸುಘೋಷ ಉಡುಪಿ ವತಿಯಿಂದ...
error: Content is protected !!