Friday, March 27, 2026
Friday, March 27, 2026

ಕುರಿ/ಮೇಕೆ ಘಟಕ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ

ಕುರಿ/ಮೇಕೆ ಘಟಕ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ

Date:

ಉಡುಪಿ, ಮಾ.4: ಕರ್ನಾಟಕ ಕುರಿ ಮತ್ತು ಎಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿಕ್ಕಮಗಳೂರು ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (10+1) ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಪಡೆಯಲು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ 18 ರಿಂದ 60 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಉಡುಪಿ ತಾಲೂಕು ಮೊ.ನಂ: 9448134852, ಕಾಪು ತಾಲೂಕು ಮೊ.ನಂ: 8217389838, ಬ್ರಹ್ಮಾವರ ತಾಲೂಕು ಮೊ.ನಂ: 9448623690, ಕುಂದಾಪುರ ತಾಲೂಕು ಮೊ.ನಂ: 9448163237, ಬೈಂದೂರು ತಾಲೂಕು ಮೊ.ನಂ: 9741993045, ಕಾರ್ಕಳ ತಾಲೂಕು ಮೊ.ನಂ: 9845753062 ಹಾಗೂ ಹೆಬ್ರಿ ತಾಲೂಕು ಮೊ.ನಂ: 9986764615 ಅನ್ನು ಅಥವಾ ಜಿಲ್ಲಾ
ಅನುಷ್ಠಾನಾಧಿಕಾರಿಗಳು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಚಿಕ್ಕಮಗಳೂರು ದೂರವಾಣಿ ಸಂಖ್ಯೆ:9448157129 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾಣಪುರ: ಶ್ರೀ ಸುಧೀಂದ್ರ ಮಂಟಪ

ಕಲ್ಯಾಣಪುರ, ಮಾ.26: ಕಾಶೀ ಮಠಾಧೀಶರಾಗಿದ್ದ ಶ್ರೀ ಸುಧೀಂದ್ರತೀರ್ಥ ಶ್ರೀಪಾದಂಗಳವರ ಜನ್ಮ ಶತಮಾನೋತ್ಸವದ...

ಅಜ್ಜರಕಾಡು: ಬಡ ರೋಗಿಗಳಿಗೆ ಆಹಾರ ಪಧಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಉಡುಪಿ, ಮಾ.26: ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂ.ಸಿ.ಕೆ.ಎಸ್ ಫುಡ್...

ಕುಂದಾಪುರದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ

ಉಡುಪಿ, ಮಾ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ...
error: Content is protected !!