Friday, February 20, 2026
Friday, February 20, 2026

ಸಾರಥಿ ಯೋಜನೆಯಡಿ ಮಂಜೂರಾಗಿರುವ ಗೂಡ್ಸ್ ವಾಹನ ವಿತರಣೆ

ಸಾರಥಿ ಯೋಜನೆಯಡಿ ಮಂಜೂರಾಗಿರುವ ಗೂಡ್ಸ್ ವಾಹನ ವಿತರಣೆ

Date:

ಕಾಪು, ಫೆ.19: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ವತಿಯಿಂದ ಉದ್ಯಮಶೀಲತಾ ಸ್ವಾವಲಂಬಿ ಸಾರಥಿ ಯೋಜನೆಯಡಿ ಮಂಜೂರಾಗಿರುವ ಗೂಡ್ಸ್ ವಾಹನ ಹಾಗೂ ಸಹಾಯಧನವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಫಲಾನುಭವಿಗಳಿಗೆ ವಿತರಿಸಿದರು.

ಸ್ವಾವಲಂಬಿ ಸಾರಥಿ ಯೋಜನೆಯಡಿ ಪಲಿಮಾರು ಗ್ರಾಮ ನಿವಾಸಿ ದಿನೇಶ್, ಕೊರಂಗ್ರಪಾಡಿ ಗ್ರಾಮದ ಅಭಿಲಾಶ್, ಅಲೆವೂರು ಗ್ರಾಮದ ದುರಗಪ್ಪ ಅವರಿಗೆ ಸೇರಿದಂತೆ ಒಟ್ಟು 3 ಫಲಾನುಭವಿಗಳಿಗೆ ಗೂಡ್ಸ್ ವಾಹನ ವಿತರಿಸಿ ಉದ್ಯಮಶೀಲತಾ ಯೋಜನೆಯಡಿ ಪಡುಬಿದ್ರಿ ಗ್ರಾಮ ನಿವಾಸಿ ಹರೀಶ್, ಬೊಮ್ಮರಬೆಟ್ಟು ಗ್ರಾಮದ ಮಂಜುನಾಥ್ ಟಿ.ಎಲ್, ಪಲಿಮಾರು ಗ್ರಾಮದ ಸೌಮ್ಯ ಸೇರಿದಂತೆ 3 ಫಲಾನುಭವಿಗಳಿಗೆ ಆರ್ಥಿಕ ಸಹಾಧನ ಆದೇಶ ಪತ್ರವನ್ನು ಶಾಸಕರು ನೀಡಿದರು.

ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೌಮಲತಾ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ರಾಯೇಶ್ ಪೈ, ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೀಯಾನಂದ ಹೆಗಡೆ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ, ಬೆಳ್ಳಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹರ್ಷಿತ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಶಂಕರ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಟಪಾಡಿ: ಹೆದ್ದಾರಿ ಕಾಮಗಾರಿ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಕಟಪಾಡಿ, ಫೆ.19: ಕಟಪಾಡಿ ಜಂಕ್ಷನ್ ಬಳಿ ಈಗಾಗಲೇ ಓವರ್ ಪಾಸ್ ಕಾಮಗಾರಿ...

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ: ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ

ಮಣಿಪಾಲ, ಫೆ.19: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು...

ಕಾರ್ಕಳ ಜ್ಞಾನಸುಧಾ: ಜೆಇಇ ಮೈನ್ ಸಾಧಕರಿಗೆ ಸನ್ಮಾನ

ಉಡುಪಿ, ಫೆ.19: ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣಿಕ ಕ್ಷೇತ್ರದಲಿ...
error: Content is protected !!