Tuesday, March 10, 2026
Tuesday, March 10, 2026

ಜೆಇಇ ಮೈನ್ (ಬಿ.ಟೆಕ್) ಮೊದಲ ಹಂತದ ಫಲಿತಾಂಶ: ಜ್ಞಾನಸುಧಾದ 8 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಸಾಧಕ ವಿದ್ಯಾರ್ಥಿಗಳಿಗೆ ಟ್ರಸ್ಟಿನಿಂದ 3.42ಲಕ್ಷ ರೂಪಾಯಿ ಘೋಷಣೆ

ಜೆಇಇ ಮೈನ್ (ಬಿ.ಟೆಕ್) ಮೊದಲ ಹಂತದ ಫಲಿತಾಂಶ: ಜ್ಞಾನಸುಧಾದ 8 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಸಾಧಕ ವಿದ್ಯಾರ್ಥಿಗಳಿಗೆ ಟ್ರಸ್ಟಿನಿಂದ 3.42ಲಕ್ಷ ರೂಪಾಯಿ ಘೋಷಣೆ

Date:

ಕಾರ್ಕಳ, ಫೆ.17: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ ಪ್ರಥಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.

ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ. 22 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 48 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 74 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 94 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 220 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ 3.42ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ 3.42ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.

ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ 99.9055199 ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್‌ರವರಿಗೆ 1 ಲಕ್ಷ ರೂಪಾಯಿಯನ್ನು, 99.8254499 ಪರ್ಸಂಟೈಲ್ ಪಡೆದ ಸೋಹನ್ ಗಿರಿರಡ್ಡಿಯವರಿಗೆ ರೂ.75 ಸಾವಿರವನ್ನು, 99.6543996 ಪರ್ಸಂಟೈಲ್ ಪಡೆದ ಮೇಧಾನ್ಶ್ ಎನ್.ಬಿ ಹಾಗೂ 99.6130095 ಪರ್ಸಂಟೈಲ್ ಪಡೆದ ಅನಿರುದ್ಧ್ ಆರ್ ಉಡುಪರವರಿಗೆ ತಲಾ ರೂ.35 ಸಾವಿರವನ್ನು, 99.5087645 ಪರ್ಸಂಟೈಲ್ ಪಡೆದ ತುಷಾರ್ ಎ ಶೆಟ್ಟಿಯವರಿಗೆ ರೂ.25 ಸಾವಿರವನ್ನು, 99.4253270 ಪರ್ಸಂಟೈಲ್ ಪಡೆದ ನಿಶಾನ್ ಎನ್ ಸಾಲ್ಯಾನ್, 99.2313099 ಪರ್ಸಂಟೈಲ್ ಪಡೆದ ತೇಜಸ್ ನಾಯಕ್ ಹಾಗೂ 99.0090928 ಪರ್ಸಂಟೈಲ್ ಪಡೆದ ಅನಿಕೇತ್ ಆರ್ ಉಡುಪರವರಿಗೆ ತಲಾ ರೂ.15 ಸಾವಿರವನ್ನು ಘೋಷಿಸಿರುತ್ತಾರೆ.

ಜೊತೆಗೆ ಮನೋಜ್ ಎಂ 98.9239678 ಪರ್ಸಂಟೈಲ್, ವೈಷ್ಣವಿ ಕುಲಕರ್ಣಿ 98.8384918 ಪರ್ಸಂಟೈಲ್, ಸಂಜನಾ ಬಿ.ಎ 98.7722886 ಪರ್ಸಂಟೈಲ್, ಸಾಯಿ ರಾಘವೇಂದ್ರ ಬಿ. 98.6885295 ಪರ್ಸಂಟೈಲ್, ಮಯೂರ್ ವಿ ಗೌಡ 98.5943336 ಪರ್ಸಂಟೈಲ್, ವರುಣ್ ಜೆ 98.5707051 ಪರ್ಸಂಟೈಲ್, ಅನಾಮಯ ಯೋಗೇಶ್ ದಿವಾಕರ್ 98.4810184 ಪರ್ಸಂಟೈಲ್, ವಿದ್ವತ್ ವಿ ಕಾಮತ್ 98.4287569 ಪರ್ಸಂಟೈಲ್, ಪ್ರಭಂಜನ್ ಭಟ್ 98.4281519 ಪರ್ಸಂಟೈಲ್, ಆಸ್ತಿಕಾ ಆರ್ ಭಾಗವತ್ 98.413806 ಪರ್ಸಂಟೈಲ್, ಜೀವನ್ ಎನ್ ಬಿ 98.3173191 ಪರ್ಸಂಟೈಲ್, ದಿಗಂತ್ ಎಸ್ 98.2292253 ಪರ್ಸಂಟೈಲ್, ಎನ್.ಎಸ್.ವಿವೇಕ್ 98.1685978 ಪರ್ಸಂಟೈಲ್, ವಿಶಾಖ್ ಕೃಷ್ಣರಾಜ್ 98.132748 ಪರ್ಸಂಟೈಲ್ ಪಡೆದಿದ್ದು, ಇವರಿಗೆ ತಲಾ ರೂ. ಒಂದು ಸಾವಿರ ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ.500 ನಗದು ಪುರಸ್ಕಾರವನ್ನು ಘೋಷಿಸಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಎಲ್‌ಪಿಜಿ ಕೊರತೆ; ಬೆಂಗಳೂರು ನಗರದಾದ್ಯಂತ ಹೋಟೆಲ್‌ ಸ್ಥಗಿತ?

ಬೆಂಗಳೂರು, ಮಾ.10: ನಗರದಾದ್ಯಂತ ನೂರಾರು ತಿನಿಸುಗಳು ಮತ್ತು ರೆಸ್ಟೋರೆಂಟ್‌ಗಳನ್ನು ಪ್ರತಿನಿಧಿಸುವ ಬೆಂಗಳೂರು...

ಪಶ್ಚಿಮ ಏಷ್ಯಾ ಸಂಘರ್ಷ: ಹೂಡಿಕೆದಾರರು ಶಾಂತವಾಗಿರಲು ಸೆಬಿ ಮುಖ್ಯಸ್ಥರ ಮನವಿ

ಮುಂಬಯಿ, ಮಾ.10: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಹಣಕಾಸು ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಏರಿಳಿತದ...

ಎಲ್.ಪಿ.ಜಿ ಉತ್ಪಾದನೆಯನ್ನು ಹೆಚ್ಚಿಸಲು ತೈಲ ಸಂಸ್ಕರಣಾಗಾರಗಳಿಗೆ ಸರ್ಕಾರ ಆದೇಶ

ನವದೆಹಲಿ, ಮಾ.10: ಸರ್ಕಾರವು ತೈಲ ಸಂಸ್ಕರಣಾಗಾರಗಳಿಗೆ ಹೆಚ್ಚಿನ ಎಲ್.ಪಿ.ಜಿ ಉತ್ಪಾದನೆಗಾಗಿ ಮತ್ತು...

ತೆಂಕನಿಡಿಯೂರು ಕಾಲೇಜು: ವಿಶ್ವ ಮಹಿಳಾ ದಿನಾಚರಣೆ

ತೆಂಕನಿಡಿಯೂರು, ಮಾ.10: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...
error: Content is protected !!