Monday, February 9, 2026
Monday, February 9, 2026

ಸರಸ್ವತಿ ವಿದ್ಯಾಲಯ: ‘ಪಯಣ’

ಸರಸ್ವತಿ ವಿದ್ಯಾಲಯ: ‘ಪಯಣ’

Date:

ಗಂಗೊಳ್ಳಿ, ಫೆ.8: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ಗಮನವನ್ನು ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಓದಿನಲ್ಲಿ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸಲು ನೆರವಾಗುತ್ತದೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ್ ಹೆಚ್‌.ಜಿ ಅವರು ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಇಲ್ಲಿನ ಎಸ್‌.ವಿ ಕಾಮರ್ಸ್ ಕ್ಲಬ್ ಮತ್ತು ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಆಶ್ರಯದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿನ ವಿಶೇಷ ಪರೀಕ್ಷಾ ಮಾರ್ಗದರ್ಶನ ಶಿಬಿರದ ಕಾರ್ಯಕ್ರಮ ‘ಪಯಣ’ವನ್ನು ಉದ್ಘಾಟಿಸಿ ಮಾತನಾಡಿದರು.

ಮಾರ್ಗದರ್ಶನವನ್ನು ನೀಡಿದ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ ಪರೀಕ್ಷೆ ಎಂದರೆ ಭಯಪಡುವುದಾಗಲಿ ಅಥವಾ ಸಂಭ್ರಮ ಪಡುವುದಾಗಲಿ ಸಲ್ಲದು. ಇದೊಂದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಜೀವನದ ಒಂದು ಭಾಗ. ನಮ್ಮ ಸ್ಪರ್ಧೆ ಎನ್ನುವುದು ಅಂಕಗಳೊಂದಿಗೆ ಇರಲಿ. ಎಂದು ಹೇಳಿದರು. ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಚೇರಿ ಸಹಾಯಕಿ ಯಮುನಾ ಮತ್ತು ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಸಿಂಧು ಖಾರ್ವಿ ಅತಿಥಿಗಳನ್ನು ಸ್ವಾಗತಿಸಿದರು. ಧನ್ಯ ಯು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೆರ್ಡೂರು: ಜನಸಂಪರ್ಕ ಸಭೆ

ಪೆರ್ಡೂರು, ಫೆ.8: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ,...

ಕಾರ್ಕಡ ಗೆಳೆಯರ ಬಳಗ: ಸಾಧಕರಿಗೆ ಸನ್ಮಾನ

ಕೋಟ, ಫೆ.8: ಕಾರ್ಕಡ ಗೆಳೆಯರ ಬಳಗ ಇದರ ೩೮ನೇ ವಾರ್ಷಿಕೋತ್ಸವ, ಪ್ರತಿಭಾ...

ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ : ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.7: ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಬರುವಂತೆ ಮಾಡುವುದರೊಂದಿಗೆ ಅವರು...
error: Content is protected !!