ಉಡುಪಿ, ಜ.31: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ ಲಿ. ಆಯೋಜಿಸಿದ್ದ 21 ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆಯು ತಮಿಳುನಾಡಿನ ಪುದುಚೇರಿಯಲ್ಲಿ ನಡೆಯಿತು. ರಾಷ್ಟ್ರದ ವಿವಿಧ ರಾಜ್ಯಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸದ್ವಿನ್ ಎಸ್ ಆಚಾರ್ಯ ತಲ್ಲೂರು ಇವರು ZX ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಕುಂದಾಪುರ ಸೆಂಟರ್ ನ ಮಖ್ಯಸ್ಥ ಪ್ರಸನ್ನ ಕೆ. ಬಿ., ಬೋಧಕಿ ಮಹಾಲಕ್ಷ್ಮಿ ಮತ್ತು ದೀಪಾ ತರಬೇತಿ ನೀಡಿರುತ್ತಾರೆ. ಇವರು ಜಯಶ್ರೀ ಮತ್ತು ಸದಾನಂದ ಆಚಾರ್ಯ ತಲ್ಲೂರು ದಂಪತಿಗಳ ಪುತ್ರ, ಜಯರಾಣಿ ಆಂಗ್ಲ ಮಾದ್ಯಮ ಶಾಲೆ ತಲ್ಲೂರು ಇಲ್ಲಿನ 4 ನೇ ತರಗತಿ ವಿದ್ಯಾರ್ಥಿ.
ರಾಷ್ಟ್ರಮಟ್ಟದ ಅಬಾಕಸ್: ಸದ್ವಿನ್ ಎಸ್ ಆಚಾರ್ಯಗೆ ಪ್ರಥಮ ಸ್ಥಾನ
ರಾಷ್ಟ್ರಮಟ್ಟದ ಅಬಾಕಸ್: ಸದ್ವಿನ್ ಎಸ್ ಆಚಾರ್ಯಗೆ ಪ್ರಥಮ ಸ್ಥಾನ
Date:




By
ForthFocus™