ಉಡುಪಿ, ಜ.31: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಬೆಂಗಳೂರು ಇದರ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಕೌಶಲ್ಯ) ಕಾತ್ಯಾಯಿನಿ ದೇವಿ ಕೆ.ಎ.ಎಸ್ ಇವರು ಬ್ರಹ್ಮಾವರ ತಾಲೂಕಿನ ರುಡ್ಸೆಟ್ ತರಬೇತಿ ಸಂಸ್ಥೆಗೆ ಭೇಟಿ ನೀಡಿದರು. ತರಬೇತಿಗಳ ಶಿಬಿರಾರ್ಥಿಗಳೊಂದಿಗೆ ತರಬೇತಿಯ ಬಗ್ಗೆ ಚರ್ಚೆ ನಡೆಸಿ ಸೌಲಭ್ಯಗಳ ಬಗ್ಗೆ ವಿಚಾರಿಸಿದರು ನಂತರ ನಿರ್ದೇಶಕರು ಹಾಗೂ ಉಪನ್ಯಾಸಕರೊಂದಿಗೆ ಸಭೆ ನಡೆಸಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕೈಗೊಳ್ಳುವ ವಿವಿಧ ವೃತ್ತಿ ತರಬೇತಿಯ ಬಗ್ಗೆ ಹಾಗೂ ನಿಗದಿತ ಗುರಿ ಸಾಧನೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಡಾ.ಬೊಮ್ಮಯ್ಯ, ಉಪನ್ಯಾಸಕರಾದ ಸಂತೋಷ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ ಉಪಸ್ಥಿತರಿದ್ದರು. ನಂತರ ಉಡುಪಿ ತಾಲೂಕಿನ ಸಂಜೀವಿನಿ ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಸಂಜೀವಿನಿ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳನ್ನು ಪರಿಶೀಲಿಸಿ ಮಾರುಕಟ್ಟೆ ವ್ಯವಸ್ಥೆಯ ಅಭಿವೃದ್ಧಿ ಬಗ್ಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆ ನೀಡಿದರು.




By
ForthFocus™