Tuesday, January 27, 2026
Tuesday, January 27, 2026

ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ

ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ

Date:

ಕುಂದಾಪುರ, ಜ.26: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ತಾಯಂದಿರು ಸ್ವಯಂ ಅಡುಗೆಯನ್ನು ತಯಾರಿಸಿ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಬಂದು ಕೈತುತ್ತು ನೀಡಿ ಉಣಿಸುವ ‘ಅಮೃತ ಕೈತುತ್ತಿನ ಮಾಧುರ್ಯ’ ಎನ್ನುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯನಿ ಸುಮನ ಪಡಿಯಾರ್ ಮಾತನಾಡಿ, ಶಾಲೆಗಳಲ್ಲಿ ಇಂಥ ಕಾರ್ಯಕ್ರಮಗಳ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯದ ಮೌಲ್ಯ ಮಕ್ಕಳಿಗೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷರಾಗಿರುವ ಅಜಿತ್ ಭಟ್ ಮತ್ತು ಶಿಕ್ಷಕ-ರಕ್ಷಕ ಸಮಿತಿಯ ಕಾರ್ಯದರ್ಶಿಯಾಗಿರುವ ಅಶೋಕ್ ಎನ್.ಡಿ ಉಪಸ್ಥಿತರಿದ್ದರು. ಅಕ್ಷರ ದಾಸೋಹ ಕೋಶಾಧಿಕಾರಿಯಾಗಿರುವ ಜಿ. ವೆಂಕಟೇಶ್ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ದೀಕ್ಷಿತ್ ಮೇಸ್ತ ಸ್ವಾಗತಿಸಿ, ಶಿಕ್ಷಕಿಯರಾದ ಲಕ್ಷ್ಮಿ ಖಾರ್ವಿ ನಿರೂಪಿಸಿ, ರೇಖಾ ಖಾರ್ವಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಲುಮರದ ತಿಮ್ಮಕ್ಕ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಜ.26: ನಗರದ ದೊಡ್ಡಣಗುಡ್ಡೆ ಪುಷ್ಟ ಹರಾಜು ಕೇಂದ್ರದ ಆವರಣದಲ್ಲಿ ಸಾಲುಮರದ...

ಕಾರ್ಕಳ ಜ್ಞಾನಸುಧಾ: ಗಣರಾಜ್ಯೋತ್ಸವ ಸಂಭ್ರಮ

ಕಾರ್ಕಳ, ಜ.26: ನಮ್ಮ ಜೀವನ ವಿಧಾನವೇ ಸಂವಿಧಾನ. ಇದರ ಘನತೆ ಗೌರವವನ್ನು...

ಅಸಂಘಟಿತ ಕಾರ್ಮಿಕರು ಕೇಂದ್ರ ಪಿಂಚಣಿ ಯೋಜನೆಗಳ ಲಾಭ ಪಡೆಯುವಂತಾಗಲಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಜ.22: ಅಸಂಘಟಿತ ವಲಯದ ಕಾರ್ಮಿಕರುಗಳು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ...
error: Content is protected !!