ಕೋಟ, ಜ.18: ಪ್ರತಿಭೆ ಅನಾವರಣಗೊಳ್ಳಲು ಗುರುವಿನ ಪಾತ್ರ ಮಹತ್ವವಾದದ್ದು. ಈ ನಿಟ್ಟಿನಲ್ಲಿ ಪ್ರಜ್ಞಾ ಎಂಬ ಕಲಾ ಶಕ್ತಿ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮುವ ಹಾಗೆ ಮಾಡಲಿ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಹೇಳಿದರು. ಗೆಳೆಯರ ಬಳಗ ಸಭಾಂಗಣ, ದಾನಗುಂದು ಹಂದಟ್ಟು ಇಲ್ಲಿ ಅಪ್ಪು ಆರ್ಟ್ಸ್ ಚಿತ್ರಕಲಾ ಮತ್ತು ರಂಗೋಲಿ, ಆದಿರುದ್ರ ನೃತ್ಯಶಾಲಾ ಭರತನಾಟ್ಯ ಇದರ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಗೆಳೆಯರ ಬಳಗ ಹಂದಟ್ಟು ಅಧ್ಯಕ್ಷ ಲೋಹಿತ್ ಜಿ. ಸಾಲಿಯಾನ್ ವಹಿಸಿದ್ದರು. ರಂಗೋಲಿ ತರಗತಿಯನ್ನು ರಂಗೋಲಿ ಕಲಾವಿದೆ ಕಟ್ಕರೆ ಕೋಟೇಶ್ವರ ವೀಣಾ ಐತಾಳ್, ಆದಿರುದ್ರ ನೃತ್ಯ ಭರತನಾಟ್ಯ ತರಗತಿಯನ್ನು ಜ್ಞಾನದೀಪ ನೃತ್ಯ ಕಲಾಕೇಂದ್ರದ ಗುರುಗಳಾದ ವಿದ್ವಾನ್ ಶ್ರೀಧರ್ ರಾವ್ ಬನ್ನಂಜೆ ಉದ್ಘಾಟಿಸಿದರು. ಕೋಟ ವಿವೇಕ ವಿದ್ಯಾಸಂಸ್ಥೆಯ ಶಿಕ್ಷಕ ಸಂಜೀವ ಗುಂಡ್ಮಿ ಉಪಸ್ಥಿತರಿದ್ದರು.
ನಾಟ್ಯ ಹಾಗೂ ಅಪ್ಪು ಆಟ್ಸ್ ಮುಖ್ಯಸ್ಥೆ ಪ್ರಜ್ಞಾ ಹಂದಟ್ಟು ಸ್ವಾಗತಿಸಿದರು. ಭರತನಾಟ್ಯ ತರಬೇತುದಾರರಾದ ವಿದುಷಿ ಅಂಜನಾದೇವಿ ವಂದಿಸಿದರು. ಪೂರ್ಣಚಂದ್ರ ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಗೀತಾ ಹಂದಟ್ಟು ಸಹಕರಿಸಿದರು.




By
ForthFocus™