Saturday, February 7, 2026
Saturday, February 7, 2026

ಮಟ್ಟುಗುಳ್ಳ ಹೊರೆಕಾಣಿಕೆ

ಮಟ್ಟುಗುಳ್ಳ ಹೊರೆಕಾಣಿಕೆ

Date:

ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪ್ರಥಮ‌ ಪರ್ಯಾಯಕ್ಕೆ ಮಟ್ಟು ಭಾಗದ ಭಕ್ತರು ಶನಿವಾರ ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು. ನಗರದ ಸಂಸ್ಕೃತ ಕಾಲೇಜಿನ‌ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ‌ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು.

ಶ್ರೀ ಕೃಷ್ಣ ಮಠ ಮತ್ತು ಮಟ್ಟುಗುಳ್ಳಕ್ಕೆ ವಿಶೇಷ ಸಂಬಂಧವಿದೆ. ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜದಿಂದ ಹುಟ್ಟಿಕೊಂಡ ಗುಳ್ಳ ಇಂದು ದೇಶದಲ್ಲೇ ಜಿ‌ಐ ಪೇಟೆಂಟ್ ಪಡೆದ‌ ಮೊದಲ ತರಕಾರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಕೃಷ್ಣ ಮಠದ ನಿತ್ಯ ಬಳಕೆಯ ತರಕಾರಿಗಳಲ್ಲಿ ಗುಳ್ಳ ತರಕಾರಿಗೆ ವಿಶೇಷ ಸ್ಥಾನವಿದೆ. ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರು, ಡಾ. ಟಿ ಎಸ್ ರಾವ್, ಪ್ರದೀಪ್ ರಾವ್, ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಶ್ರೀಕಾಂತ್ ಉಪಾಧ್ಯಾಯ, ಸಂದೀಪ್ ಮಂಜ, ನರೇಶ್ ಪಾಲನ್, ಸದಾನಂದ‌ ಸುವರ್ಣ, ಜಯ ಪೂಜಾರಿ, ಎಂ‌ ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ಮನು ಪಟೇಲ್

ಉಡುಪಿ, ಫೆ.7Regio: ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳಿಗೆ ಸಂಬಂಧಪಟ್ಟಂತೆ ಮೊದಲನೇ...

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಹೆಮ್ಮಾಡಿ, ಫೆ.7: ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ...

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...
error: Content is protected !!