Saturday, January 17, 2026
Saturday, January 17, 2026

ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ

ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ

Date:

ಉಡುಪಿ, ಜ.17: ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ಸಾದ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಮತ್ತು ಅವರ ಪೊಲಿತಾಂಶಗಳ ಸುಧದಾರಣೆಗೆ ಖಾಸಗೀ ಸಂಸ್ಥೆಗಳ ಪಾತ್ರ ದೊಡ್ಡದು. ಶಿಕ್ಷಣ ಸಂಸ್ಥೆಯೊಳಗೆ ವ್ಯಾಪಾರ ಮನೋಧರ್ಮದ ಬದಲಾಗಿ ಸೇವಾ ಮನೋಭಾವವೇ ಮೂಲವಾಗಬೇಕು. ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಚಿಂತಿಸದೆ ಫಲಿತಾಂಶ ದ ಕಡೆಗೆ ದುಡಿಯುವ ಮನಸ್ಸು ನಮ್ಮದಾಗಬೇಕು, ಪ್ರತೀ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆ ಬಲವಾಗಬೇಕು ಎಂದು ಕುಪ್ಮಾ ರಾಜ್ಯ ಸಮಿತಿಯ ಅಧ್ಯಕ್ಷರಾದ ಮೋಹನ್ ಆಳ್ವಾ ಉದ್ಘಾಟಿಸಿ , ಪದಾದಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಮಾತನಾಡಿ, ಇಲಾಖೆ ಮತ್ತು ಕುಪ್ಮಾ ಸಂಘಟನೆ ಜೊತೆಗೂಡಿ ಕೆಲಸ ನಿರ್ವಹಿಸಬೇಕು. ಪ್ರತೀ ಮಗುವಿಗೂ ಶಿಕ್ಷಣ ಸಿಗಲು ಖಾಸಗೀ ಸಂಸ್ಥೆಗಳ ಪಾಲು ದೊಡ್ಡದು ಎಂದು ಶುಭ ಹಾರೈಸಿದರು.

ಕುಪ್ಮಾ ರಾಜ್ಯ ಸಮಿತಿಯ ಗೌರವಾಧ್ಯಕ್ಷರಾದ ರಾಧಾಕೃಷ್ಣ ಶೆಣೈ ಮಾತನಾಡಿ, ಎಲ್ಲಾ ಖಾಸಗೀ ಸಂಸ್ಥೆಗಳು ಆರೋಗ್ಯಕರವಾದ ಸ್ಪರ್ಧೆಗಳು ಇರಲಿ ಎಂದರು. ಕಾರ್ಯಕ್ರಮದ ಆದ್ಯಕ್ಷತೆಯನ್ನ ವಹಿಸಿದ್ದ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ,ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ದ್ವನಿಯಾಗಿ ಕುಪ್ಮಾ ಕೆಲಸ‌ ನಿರ್ವಹಿಸುತ್ತಿದೆ ಎಂದರು. ಉಡುಪಿ ಜಿಲ್ಲಾ ಕುಪ್ಮಾ ಸಮಿತಿಯ ಖಜಾಂಜಿ ಡಾ. ಸುಧಾಕರ್‌ ಶೆಟ್ಟಿ ಆಶಯ ನುಡಿಗಳನ್ನಾಡಿ ವಿದ್ಯಾರ್ಥಿಗಳ ಏಳಿಗೆಗೆ ಅವಿರಥವಾಗಿ ಶ್ರಮ ವಹಿಸಲು ಎಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕುಪ್ಮಾ ಉಡುಪಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಹೋರಾಟಗಳಿಗೆ ಸಂಘಟನೆಯ ಅವಶ್ಯಕತೆ ಇದೆ ಎಂದರು. ಉಡುಪಿ ಜಿಲ್ಲಾ ಸಮಿತಿಯ ಪದಾದಿಕಾರಿಗಳು , ಶಿಕ್ಷಣ ತಜ್ಞರು, ಶಿಕ್ಷಕರು, ಉಪಸ್ಥಿತರಿದ್ದರು. ಸಿ.ಎ ಗೋಪಾಲಕೃಷ್ಣ ‌ಭಟ್ ಸ್ವಾಗತಿಸಿ, ಕುಪ್ಮಾ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಅಶ್ವತ್ಥ್ ಎಸ್ ಎಲ್ ವಂದಿಸಿ, ಲೋಹಿತ್ ಎಸ್ ಕೆ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಟ್ಟುಗುಳ್ಳ ಹೊರೆಕಾಣಿಕೆ

ಉಡುಪಿ, ಜ.17: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪ್ರಥಮ‌...

ಸಾಂಸ್ಕೃತಿಕ ಸ್ಪರ್ಧೆಗಳಿಂದ ಸುಪ್ತ ಪ್ರತಿಭೆಗಳ ಅನಾವರಣ: ಪಿ.ಎನ್ ಆಚಾರ್ಯ

ತೆಂಕನಿಡಿಯೂರು, ಜ.17: “ಮಕರ ಸಂಕ್ರಾಂತಿ ಹಬ್ಬದಂದು ವಿದ್ಯಾರ್ಥಿಗಳನ್ನು ಸ್ಪರ್ಧೆಗಳ ಆಯೋಜನೆ ಮೂಲಕ...

ವಕೀಲರು ಮತ್ತು ಜನಸಾಮಾನ್ಯರ ಸಂಬಂಧ ಒಂದೇ ನಾಣ್ಯದ ಮುಖ ಇದ್ದಂತೆ: ರವಿ ಕುಮಾರ್ ಗಂಗೊಳ್ಳಿ

ಗಂಗೊಳ್ಳಿ, ಜ.17: ಜನಸಾಮಾನ್ಯರ ಪ್ರತೀ ಸಮಸ್ಯೆಯೂ ವಕೀಲರನ್ನು ಸ್ಪಂದಿಸುವಂತೆ ಮಾಡುತ್ತದೆ. ದೈನಂದಿನ...
error: Content is protected !!