ತೆಂಕನಿಡಿಯೂರು, ಜ.17: “ಮಕರ ಸಂಕ್ರಾಂತಿ ಹಬ್ಬದಂದು ವಿದ್ಯಾರ್ಥಿಗಳನ್ನು ಸ್ಪರ್ಧೆಗಳ ಆಯೋಜನೆ ಮೂಲಕ ಸಂಘಟಿಸುವುದು ಉತ್ತಮ ಕಾರ್ಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸುವ ಉತ್ತಮ ಕೆಲಸವನ್ನು ಸಂಘಟಕರು ಮಾಡುತ್ತಿದ್ದಾರೆ. ಆರಂಭ ಶೂರತ್ವ ಮಾಡದೆ, ಹಲವಾರು ವರ್ಷಗಳಿಂದ ನಿರಂತರವಾಗಿ ಇದನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ” ಎಂದು ಮಾಹೆ ಮಣಿಪಾಲದ ನಿವೃತ್ತ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾಧ ಪಿ.ಎನ್ ಆಚಾರ್ಯಇವರು ಹೇಳಿದರು. ಇವರು ತೆಂಕನಿಡಿಯೂರಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸುಗುಣ ಮಹಾಬಲ ಅಮೀನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ ವಹಿಸಿದ್ದು ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಭರತ್‌ರಾಜ್ ಬೈಕಾಡಿ, ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು. ಸುಷ್ಮಾ ರಾಜೇಶ್ ಆಚಾರ್ಯ ಸ್ವಾಗತಿಸಿ, ಬಾಲಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ ಆಚಾರ್ಯ ವಂದಿಸಿದರು. ಉದಯ ಜೆ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅದೇ ದಿನ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿಯ ನಿವೃತ್ತ ತಹಶಿಲ್ದಾರರಾದ ಕೆ. ಮುರಳೀಧರ ಮಾತನಾಡಿ “ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಂಸ್ಕೃತಿ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ಕಲಿಯುವುದು ಬಹಳ ಇದೆ. ಆದರೆ ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ವಿದ್ಯಾರ್ಥಿಗಳನ್ನು ಸಂಘಟಿಸಲು ಇಂತಹ ಕಾರ್ಯಕ್ರಮಗಳಿಗೆ ಬುನಾದಿ ಹಾಕಿದ ಶ್ರೀ ಬೈಕಾಡಿ ಜನಾರ್ದನ ಆಚಾರ್ಯ ಅವರು ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಆದರ್ಶಪ್ರಾಯರು.” ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಮಂಗಳೂರಿನ ರೂವಾರಿ.ಕಾಂ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ನಿವೃತ್ತ ಮುಖ್ಯೋಪಾಧ್ಯಾಯರು ರತ್ನಾವತಿ ಜೆ ಬೈಕಾಡಿ ಮಾತನಾಡಿ “ಹಳೆ ಬೇರು ಹೊಸ ಚಿಗುರು ಸೇರಿ ಮರ ಸೊಬಗು, ಅದರಂತೆಯೆ ಶ್ರೀ ಕಾಳಿಕಾಂಬಾ ಭಜನಾ ಸಂಘ, ಶ್ರೀ ದೇವಿ ಮಹಿಳಾ ಮಂಡಳಿ ಮತ್ತು ಬಾಲಸಂಸ್ಕಾರ ಕೇಂದ್ರದ ಆಯೋಜನೆಯಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಗಳನ್ನು ಎಳೆಯರೊಂದಿಗೆ ಸೇರಿಕೊಂಡು ಆಯೋಜನೆ ಮಾಡುತ್ತಿರುವುದು ಸುಸ್ಥಿರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖವಾಗಿದೆ. ಸುಮಾರು 20 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿ ಜನಮನ್ನಣೆಗೆ ಸಂಘಟನೆ ಪಾತ್ರವಾಗಿದೆ. ಇನ್ನೂ ಉತ್ತಮ ರೀತಿಯಲ್ಲಿ ಸಂಘಟನೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು ವೇದಿಕೆಯಲ್ಲಿ ಪಿ.ಎನ್. ಆಚಾರ್ಯ, ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ವಾದಿರಾಜ ಆಚಾರ್ಯ ಮತ್ತು ಬಾಲಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ ಆಚಾರ್ಯ ಉಪಸ್ಥಿತರಿದ್ದರು. ಮಾನಸ ಸ್ವಾಗತಿಸಿ, ಸುರಕ್ಷ ಪ್ರದೀಪ್ ಆಚಾರ್ಯ ವಂದಿಸಿದರು. ಮಾಧವ ಕೆ. ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಚಿತ್ರಾ ಟಿ. ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಫಲಿತಾಂಶ ಇಂತಿದೆ
ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಭಕ್ತಿಗೀತೆ ಸ್ಪರ್ಧೆ ಪ್ರಥಮ: ಚಿರಾಯುಶ್, ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ದ್ವಿತೀಯ: ಪ್ರಖ್ಯಾತ್ ಯು ಆಚಾರ್ಯ ರಾಧಾ ವಿದ್ಯಾನಿಕೇತನ್ ಸ್ಕೂಲ್ ತೆಂಕನಿಡಿಯೂರು ತೃತೀಯ: ದಾಕ್ಷಾಯಿಣಿ, ಎಲ್.ವಿ.ಪಿ. ಅನುದಾನಿತ ಹಿ.ಪ್ರಾ.ಶಾಲೆ ಪುತ್ತೂರು ಚಿತ್ರಕಲಾ ಸ್ಪರ್ಧೆ ಪ್ರಥಮ: ನಿಹಾರ್ ಜೆ. ಎಸ್., ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ದ್ವಿತೀಯ: ಅನ್ವಿತ್ ಆರ್ ಶೆಟ್ಟಿಗಾರ್, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿ ತೃತೀಯ: ನಿಧೀಶ್ ಜೆ ನಾಯ್ಕ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ
ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಪ್ರಥಮ: ವರುಣ್ ಶೆಟ್ಟಿ ಮತ್ತು ಅವನೀಶ್, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು ದ್ವಿತೀಯ: ಆಭಿಜ್ಞಾ ಮತ್ತು ಲಕ್ಷ್ಮವ್ವ, ಸರಕಾರಿ ಪದವಿ ಪೂರ್ವ ಕಾಲೇಜು ತೆಂಕನಿಡಿಯೂರು ತೃತೀಯ: ಆಯುರ್ ಪ್ರದೀಪ್ ಮತ್ತು ಮನ್ವಿತ್ ಡಿ ಅಮೀನ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ. ಭಾವಗಾನ ಸ್ಪರ್ಧೆ ಪ್ರಥಮ: ವಿನಯ್, ಪ್ರೌಢ ಶಾಲಾ ವಿಭಾಗ, ಸರಕಾರಿ ಪದವಿ ಪೂರ್ವ ಕಾಲೇಜು, ತೆಂಕನಿಡಿಯೂರು ದ್ವಿತೀಯ: ಶ್ರವಣ್, ಪ್ರೌಢ ಶಾಲಾ ವಿಭಾಗ, ಸರಕಾರಿ ಪದವಿ ಪೂರ್ವ ಕಾಲೇಜು, ತೆಂಕನಿಡಿಯೂರು
ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಪ್ರಥಮ: ಪೂರ್ಣಚಂದ್ರ ಉಡುಪ ಮತ್ತು ಅನಘ, ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ದ್ವಿತೀಯ: ಶರತ್ ಕುಮಾರ್ ಮತ್ತು ಮಂಜುನಾಥ, ಎಸ್.ಆರ್.ಎಸ್.ಎಂ.ಎನ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ತೃತೀಯ: ಸೋಹನ್ ಮತ್ತು ಸುಜನ್, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು. ಭಾಷಣ ಸ್ಪರ್ಧೆ: ಪ್ರಥಮ: ರೋಹಿಣಿ ಶೆಣೈ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ದ್ವಿತೀಯ: ಧನಲಕ್ಷ್ಮಿ ಬಿ. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ತೃತೀಯ: ಅನನ್ಯ ಆರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು.




By
ForthFocus™