ಗಂಗೊಳ್ಳಿ, ಜ.17: ಜನಸಾಮಾನ್ಯರ ಪ್ರತೀ ಸಮಸ್ಯೆಯೂ ವಕೀಲರನ್ನು ಸ್ಪಂದಿಸುವಂತೆ ಮಾಡುತ್ತದೆ. ದೈನಂದಿನ ಬದುಕಿನಲ್ಲಿ ವಕೀಲರ ಮೂಲಕ ತಮ್ಮ ಕ್ಲಿಷ್ಟ್ಟ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದರೊಂದಿಗೆ ಜನ ಸಾಮಾನ್ಯ ಮತ್ತು ವಕೀಲರ ಸಂಬಂಧ ಗಟ್ಟಿಯಾಗಿದೆ ಎಂದು ನ್ಯಾಯವಾದಿ ಮತ್ತು ಪತ್ರಕರ್ತರಾಗಿರುವ ರವಿಕುಮಾರ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿನ ಎಸ್.ವಿ. ಕಾಮರ್ಸ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ವಕೀಲಿಕೆ ಮತ್ತು ಜನಸಾಮಾನ್ಯರು ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಕೀಲರು ಕಾನೂನಿನ ವಿಷಯದಲ್ಲಿ ಅಪ್ಡೇಟ್ ಇರಬೇಕು ಮತ್ತು ಪ್ರಾಮಾಣಿಕ ಸೇವೆ ನೀಡುವ ಮೂಲಕ ಸ್ಪಂದಿಸಬೇಕು. ಕಠಿಣ ಶ್ರಮ ಮತ್ತು ಅಧ್ಯಯನ ವಕೀಲ ವೃತ್ತಿಯ ಘನತೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಗುಜ್ಜಾಡಿ ಕೋಟಿ ಚೆನ್ನಯ್ಯ ಗರಡಿಯ ಪಾತ್ರಿಗಳಾದ ರಾಘವೇಂದ್ರ ಪೂಜಾರಿ ಶುಭ ಹಾರೈಸಿದರು. ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಮಹೇಶ್ ಶೇಟ್ ಉಪಸ್ಥಿತರಿದ್ದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಎಸ್. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್ ಗಂಗೊಳ್ಳಿ ಪ್ರಸ್ತಾವಿಕ ಮಾತುಗಳನ್ನಾಡಿದರು
ಈ ಹಿಂದೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯ ಪ್ರಮುಖ ಆಕರ್ಷಣೆಯಾಗಿದ್ದ ಹಳ್ಳಿ ಮನೆ ತಂಡದ ವಿದ್ಯಾರ್ಥಿನಿಯರಾದ ಸಾನಿಕ ಎಸ್., ಲಕ್ಷ್ಮಿ ನಿಮಿತ, ಪ್ರತೀಕ್ಷಾ, ಶ್ರಾವ್ಯ, ನವಮಿ, ಭಾವನ, ಐಶು, ಅಮೂಲ್ಯ, ಮನ್ವಿತಾ, ಸಾನಿಕ ಮತ್ತು ಸಿಂಚನ ಹಳ್ಳಿ ಮನೆಯನ್ನು ನಿರ್ಮಾಣ ಮಾಡಿಕೊಡುವಲ್ಲಿ ಸಹಕರಿಸಿದ ಗಂಗೊಳ್ಳಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಹೇಶ್ ಶೇಟ್, ಮಂಜುನಾಥ ಖಾರ್ವಿ, ನಾಗರಾಜ್ ಖಾರ್ವಿ, ವಿವೇಕ್, ಮಣಿಕಂಠ ಖಾರ್ವಿ, ರಾಘವೇಂದ್ರ ಖಾರ್ವಿ, ಸುಂದರ್, ಗಣೇಶ್ ಖಾರ್ವಿ, ಸುರೇಶ್ ಖಾರ್ವಿ, ಸುಭಾಷ್ ಖಾರ್ವಿ ಮತ್ತು ನಾಗರತ್ನ ಶೇರುಗಾರ್ ಇವರನ್ನು ಅಭಿನಂದಿಸಿ ಗೌರವಿಸಿದರು. ಸಾನಿಕ ಎಸ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅಮೂಲ್ಯ ಅತಿಥಿಗಳನ್ನು ಪರಿಚಯಿಸಿದರು. ಸಾನಿಕ ಸ್ವಾಗತಿಸಿದರು. ಭಾವನ, ಐಶು, ಮನ್ವಿತ ಪ್ರಾರ್ಥಿಸಿದರು ಶ್ರಾವ್ಯ ವಂದಿಸಿದರು.




By
ForthFocus™