ಉಡುಪಿ, ಜ.16: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶುಕ್ರವಾರ ಉಡುಪಿ ಸಂತೆಕಟ್ಟೆ ಗೋಪಾಲಪುರದ ಶೀರೂರು ಮಠದಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಶೀರೂರು ಪರ್ಯಾಯದ ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು, ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ವಾಸುದೇವ ಭಟ್ ಪೆರಂಪಳ್ಳಿ, ಜಗದೀಶ್ ಎಂ.ಪಿ ಆಚಾರ್ಯ, ನಂದಕಿಶೋರ್, ಸುರೇಶ್ ಶೆಟ್ಟಿ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.




By
ForthFocus™