Friday, January 16, 2026
Friday, January 16, 2026

ಸಂಜೀವಿನಿ ಮಹಿಳೆಯರ ಕ್ರೀಡಾಕೂಟ

ಸಂಜೀವಿನಿ ಮಹಿಳೆಯರ ಕ್ರೀಡಾಕೂಟ

Date:

ಉಡುಪಿ, ಜ.15: ರಾಷ್ಟ್ರಿಯ ಗ್ರಾಮೀಣ ಜೀವನೋಪಾಯ ಅಭಿಯಾನ -ಸಂಜೀವಿನಿ, ಸ್ವರ್ಣ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಉಡುಪಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಉಡುಪಿ ತಾಲೂಕಿನ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ಸಂಜೀವಿನಿ ಕ್ರೀಡಾಕೂಟ ಹಾಗು ಲಿಂಗತ್ವ ದೌಜನ್ಯ ನಿವಾರಣಾ ಜಾಗೃತಿ ಅಭಿಯಾನ ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟವನ್ನು ಸ್ವರ್ಣ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಸುಲೋಚನಾ ದೀಪ ಬೆಳಗಿಸುವುದರ ಮೂಲಕ ಚಾಲನೆ ನಿಡಿ ಕ್ರೀಡೆಯ ಮೂಲಕ ಮಹಿಳೆಯರಲ್ಲಿ ದೈಹಿಕ ಆರೋಗ್ಯ, ಆತ್ಮವಿಶ್ವಾಸ, ಒಗ್ಗಟ್ಟು ಮತ್ತು ತಂಡಭಾವನೆ ಬೆಳೆಯುತ್ತದೆ. ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವುದೇ ದೊಡ್ಡ ಸಾಧನೆ ಎಂಬ ಮನೋಭಾವನೆ ಮಹಿಳೆಯರಲ್ಲಿ ಮೂಡುತ್ತದೆ.ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಧೈರ್ಯ, ಸ್ವಾಭಿಮಾನ ಮತ್ತು ನಾಯಕತ್ವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಶುಭ ಹಾರೈಸಿದರು.

ಸಖಿ ಒನ್ ಸ್ಟಾಫ್ ಸೆಂಟರ್ ನ ಆಪ್ತ ಸಮಾಲೋಚಕರಾದ ನೀತಾ ಇವರು ಲಿಂಗ ಸಮಾನತೆ, ದೌರ್ಜನ್ಯ ತಡೆ, ಕಾನೂನು ರಕ್ಷಣಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾಲೂಕಿನ ಸಂಜೀವಿನಿ ಯೋಜನೆಯ ಪ್ರಭಾರ ತಾಲೂಕು ಕಾರ್ಯಕ್ರಮದ ವ್ಯಸ್ಥಾಪಕರಾದ ಸವಿತಾ, ತಾಲೂಕಿನ ವಲಯ ಸಂಪನ್ಮೂಲ ವ್ಯಕ್ತಿ ಪ್ರಮೀಳಾ ಉಪಸ್ಥಿತರಿದ್ದರು.

ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್ ನ ಸಂಜೀವಿನಿ ಸ್ವ ಸಹಾಯ ಸಂಘದವರಿಗೆ ವಿವಿಧ ಆಟೋಟ ಸ್ಪರ್ಧೆಗಳಾದ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, ಥ್ರೋ ಬಾಲ್, 100, 200 ಮೀಟರ್ ರನ್ನಿಂಗ್, ಗುಂಡು ಎಸೆತ, ಬಾಸ್ಕೆಟ್ ಗೆ ಬಾಲ್ ಎಸೆಯುವುದು, ಲಿಂಬೆ ಹಣ್ಣಿನ ನಡಿಗೆ ಆಟೋ ಸ್ಪರ್ಧೆಗಳನ್ನು ಆಯೋಜಿಸಿದ್ದು ಎಲ್ಲಾ ಸ್ಪರ್ಧೆಗಳಲ್ಲಿ ಎಲ್ಲ ಸ್ವ ಸಂಘದ ಮಹಿಳೆಯರು, ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ, ಪಶು ಸಖಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಉಡುಪಿಗೆ ಬನ್ನಿ’ ಕ್ಯಾಲೆಂಡರ್ ಬಿಡುಗಡೆ

ಉಡುಪಿ, ಜ.16: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ...

ಹೊಸ ಮೆರುಗಿನೊಂದಿಗೆ ಉಡುಪಿ ರೈಲು ನಿಲ್ದಾಣ ಪ್ರಯಾಣಿಕರಿಗೆ ಲಭ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.14: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ...

ಶೀರೂರು ಪರ್ಯಾಯ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ, ಜ.15: ಶೀರೂರು ಪರ್ಯಾಯದ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ...

ಜಿಲ್ಲಾ ಮಟ್ಟದ ಸಂಜೀವಿನಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ಉಡುಪಿ, ಜ.15: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ...
error: Content is protected !!