ಕಾರ್ಕಳ, ಜ.15: ಮನುಷ್ಯನಿಗೆ ಬದುಕಿನಲ್ಲಿ ಉದ್ದೇಶವಿರಬೇಕು. ನಮ್ಮ ಸುತ್ತುಮುತ್ತಲಿರುವವರ ಬದುಕನ್ನು ಸುಂದರವಾಗಿಸುವುದು. ನಮಗೆಲ್ಲ ಗುರಿಯಾಗ ಬೇಕು ಎಂದು 92.7 ಬಿಗ್ ಎಫ್ ಎಂನ ಆರ್ ಜೆ ನಯನ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಗಣಿತನಗರ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆಯುತ್ತಿರುವ ತಿಂಗಳ ಸರಣಿ ಕಾರ್ಯಕ್ರಮ ಮೌಲ್ಯಸುಧಾದ 44ನೇ ಸಂಚಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಯುವ ಮನಸುಗಳಿಗೆ ಒಂದಿಷ್ಟು ಮಾತು’ ಎಂಬ ವಿಷಯದ ಕುರಿತಂತೆ ಮಾತನಾಡಿದರು. ನಾವೇನು ಆಗಬೇಕು, ಯಾರ ಜೊತೆ ಬೆರೆಯಬೇಕು ಎಂಬುದರಿಂದ ಅವನ ಆಯ್ಕೆಗಳು ನಿರ್ಧಾರವಾಗುತ್ತವೆ. ನಮ್ಮ ಪ್ರಯತ್ನದ ಮೇಲೆ ಎಲ್ಲವೂ ನಿಂತಿದೆ. ಅನಿವಾರ್ಯತೆಗಳೇ ಮನುಷ್ಯನ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ಸಿ.ಎ ನಿತ್ಯಾನಂದ ಪ್ರಭು, ಉಪ ಪ್ರಾಂಶುಪಾಲರುಗಳಾದ ಸಾಹಿತ್ಯ ಹಾಗೂ ಉಷಾ ರಾವ್ ಯು ಉಪಸ್ಥಿತರಿದ್ದರು, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




By
ForthFocus™