Friday, January 16, 2026
Friday, January 16, 2026

ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ

ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ

Date:

ಉಡುಪಿ, ಜ.14: ಅಲೆವೂರು ಗುಡ್ಡೆಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಸನ್ಮಾನ ನಡೆಯಿತು. ಅಲೆವೂರಿಗೆ ಆಗಮಿಸಿದ ಶ್ರೀಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು.

ಅಲೆವೂರು ಕಟ್ಟೆ ಗಣಪತಿ‌ ಸನ್ನಿಧಿ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರಿಗೆ ಬಹಳ ಪ್ರಿಯವಾದ ತಾಣ. ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗಳು ಆರತಿ ಬೆಳಗಿದರು. ಸಮಿತಿಯ ಪರವಾಗಿ ಊರ ನಾಗರಿಕರ ಪರವಾಗಿ ಶ್ರೀಗಳಿಗೆ ಗೌರವದ ಅಭಿನಂದನೆ‌ ಸಲ್ಲಿಸಲಾಯಿತು. ನಂತರ ಸಂಕಲ್ಪ ಸಭಾಂಗಣದಿಂದ ಶ್ರೀಪಾದರಿಗೆ ವಿವಿಧ ಭಜನಾ ತಂಡಗಳು, ಕೊಂಬು, ವಾದ್ಯ, ಚೆಂಡೆ, ಬ್ಯಾಂಡ್ ಹಾಗೂ ಇನ್ನಿತರ ವೇಷಭೂಷಣದೊಂದಿಗೆ ರಜತ ವಾಹನದಲ್ಲಿ ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.

ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅದ್ಯಕ್ಷ ಸಮರನಾಥ್ ಶೆಟ್ಟಿ , ಊರ ನಾಗರಿಕರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಉಡುಪಿಗೆ ಬನ್ನಿ’ ಕ್ಯಾಲೆಂಡರ್ ಬಿಡುಗಡೆ

ಉಡುಪಿ, ಜ.16: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ...

ಹೊಸ ಮೆರುಗಿನೊಂದಿಗೆ ಉಡುಪಿ ರೈಲು ನಿಲ್ದಾಣ ಪ್ರಯಾಣಿಕರಿಗೆ ಲಭ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.14: ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹು ದಿನಗಳ ಬೇಡಿಕೆ...

ಶೀರೂರು ಪರ್ಯಾಯ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

ಉಡುಪಿ, ಜ.15: ಶೀರೂರು ಪರ್ಯಾಯದ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸ್ವರೂಪ...

ಸಂಜೀವಿನಿ ಮಹಿಳೆಯರ ಕ್ರೀಡಾಕೂಟ

ಉಡುಪಿ, ಜ.15: ರಾಷ್ಟ್ರಿಯ ಗ್ರಾಮೀಣ ಜೀವನೋಪಾಯ ಅಭಿಯಾನ -ಸಂಜೀವಿನಿ, ಸ್ವರ್ಣ ಸಂಜೀವಿನಿ...
error: Content is protected !!