Thursday, January 15, 2026
Thursday, January 15, 2026

ಉಡುಪಿ: ಪರ್ಯಾಯ ಮಹೋತ್ಸವ ಅಂಗವಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಉಡುಪಿ: ಪರ್ಯಾಯ ಮಹೋತ್ಸವ ಅಂಗವಾಗಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

Date:

ಉಡುಪಿ, ಜ.13: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸುವ ದೃಷ್ಠಿಯಿಂದ ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 (ಎ) (2) ; (5) ರನ್ವಯ ಜನವರಿ 17 ರಂದು ಮಧ್ಯಾಹ್ನ 2 ಗಂಟೆಯಿಂದ ಜ. 18 ರ ಬೆಳಗ್ಗೆ 7 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ ಹಾಗೂ ಪಾರ್ಕಿಂಗ್ ನಿಷೇಧದ ಬಗ್ಗೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಈ ಕೆಳಗಿನಂತೆ ಅಧಿಸೂಚನೆ ಹೊರಡಿಸಿರುತ್ತಾರೆ.

ಮಂಗಳೂರು ಕಡೆಯಿಂದ ಉಡುಪಿ ಮಣಿಪಾಲ ಕಡೆಗೆ ಬರುವಂತಹ ವಾಹನಗಳು: ಜ. 17 ರಂದು ಮಧ್ಯಾಹ್ನ 2 ಗಂಟೆಯಿಂದ ಜ. 18 ರಂದು ಬೆಳಗ್ಗೆ 7 ಗಂಟೆಯವರೆಗೆ ನೇರವಾಗಿ ರಾ.ಹೆ 66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ನಂತರ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಮುಂದುವರಿದು ಮಣಿಪಾಲಕ್ಕೆ ಹೋಗುವುದು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು ಕಡೆಗೆ ರಾ.ಹೆ 66 ದಲ್ಲಿ ಅಂಬಲಪಾಡಿ, ಬಲಾಯಿಪಾದೆ ಮುಖೇನಾ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್‌ನಿಂದ ಮುಂದಕ್ಕೆ ಸಾಗಿ ಅಂಬಾಗಿಲು ಮುಖೇನ ಪೆರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.

ಕುಂದಾಪುರ ಕಡೆಯಿಂದ ಉಡುಪಿ, ಮಣಿಪಾಲ ಕಡೆಗೆ ಬರುವಂತಹ ವಾಹನಗಳು: ಜ. 17 ರಂದು ಸಂಜೆ 7 ಗಂಟೆಯ ತನಕ ಕುಂದಾಪುರ-ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಾಗಿಲು ಮುಖೇನ ರಾ.ಹೆ 66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಕುಂದಾಪುರದಿಂದ ಉಡುಪಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್‌ನಲ್ಲಿ ಪುಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ, ಮುಖೇನಾ ಕುಂದಾಪುರ ಕಡೆಗೆ ಹೋಗಬೇಕು. ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು ಮುಖೇನ ಪೆರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.

ಉಡುಪಿ ನಗರಕ್ಕೆ ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು: ಜ. 17 ರಂದು ಸಂಜೆ 7 ಗಂಟೆಯ ತನಕ ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ಚಿಟ್ಪಾಡಿ, ಬೀಡಿನಗುಡ್ಡೆ, ಶಾರದ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿAದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಬೀಡಿನಗುಡ್ಡೆ, ಚಿಟ್ಪಾಡಿ ಮುಖಾಂತರ ಮಿಷನ್ ಕಂಪೌಂಡ್ ರಸ್ತೆ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ವಾಪಾಸು ಹಿಂತಿರುಗಬೇಕು.

ಕಾರ್ಕಳ- ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವಂತಹ ವಾಹನಗಳು: ಜ.17 ರಂದು ಸಂಜೆ 7 ಗಂಟೆಯ ತನಕ ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿAದ ಬೆಳಗ್ಗೆ, 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಕಾಯಿನ್ ಸರ್ಕಲ್, ಪೆರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಿ, ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.

ಮಂಗಳೂರಿನಿಂದ ಮುಂಬೈಗೆ-ಬೆಂಗಳೂರಿಗೆ ಹೋಗುವ ವಾಹನಗಳು: ಜ. 17 ರಂದು ಸಂಜೆ ಮಂಗಳೂರಿನಿಂದ ಮುಂಬೈ, ಹುಬ್ಬಳ್ಳಿ ಕಡೆಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಪ್ರಯಾಣಿಕರನ್ನು ಬಲೈಪಾದೆ ಬಳಿ ಹತ್ತಿಸಿಕೊಂಡು ಹೋಗಬೇಕು. ಬೆಂಗಳೂರು ಕಡೆಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಪ್ರಯಾಣಿಕರನ್ನು ಮಣಿಪಾಲ ಇನ್ ಬಳಿ ಹತ್ತಿಸಿಕೊಂಡು ಹೋಗಬೇಕು. ಜ. 17 ರಂದು ಸಂಜೆ 7 ಗಂಟೆಯ ತನಕ ಮಂಗಳೂರಿನಿAದ
ಮುಂಬೈ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಲೈಪಾದೆ, ಅಂಬಲಪಾಡಿ, ಕರಾವಳಿ ಜಂಕ್ಷನ್, ಬನ್ನಂಜೆ, ಸಿಟಿ ಬಸ್ಸು ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ಯಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಅದೇ ಮಾರ್ಗವಾಗಿ ಪ್ರಯಾಣವನ್ನು ಮುಂದುವರಿಸುವುದು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7.00 ಗಂಟೆಯಿAದ ಬೆಳಗ್ಗೆ 7 ಗಂಟೆಯ ತನಕ ಮುಂಬೈ / ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕರಾವಳಿ ಜಂಕ್ಷನ್ ಅಂತಿಮಗೊಳಿಸಿ ಅಲ್ಲಿಯೇ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಮುಂಬೈ, ಬೆಂಗಳೂರಿಗೆ ಪ್ರಯಾಣ ಮುಂದುವರಿಸಬೇಕು.

ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ವಾಹನಗಳು: ಜ. 17 ರಂದು ಸಂಜೆ 6 ಗಂಟೆಯ ತನಕ ಮಲ್ಪೆಯಿಂದ ಬರುವ ಎಲ್ಲಾ ಬಸ್ಸುಗಳು, ಆದಿಉಡುಪಿ, ಕರಾವಳಿ ಜಂಕ್ಷನ್, ಬನ್ನಂಜೆ ಮಾರ್ಗವಾಗಿ ಉಡುಪಿ ನಗರಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಮಲ್ಪೆ ಕಡೆಯಿಂದ ಬರುವಂತಹ ಎಲ್ಲಾ ವಾಹನಗಳು ಆದಿ ಉಡುಪಿ ಜಂಕ್ಷನ್ ತನಕ
ಆಗಮಿಸಿ ನಂತರ ವಾವಾಸು ಅದೇ ಮಾರ್ಗದಲ್ಲಿ ಮಲ್ಪೆ ಕಡೆಗೆ ಹಿಂತಿರುಗಬೇಕು. ಮಂಗಳೂರು, ಕುಂದಾಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮುಖೇನ ಹಾದು ಹೋಗಬೇಕು.

ಉಡುಪಿ ಮಠಕ್ಕೆ ಸೇರುವ ಅಪ್ರೋಚಿಂಗ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿರುವ ಸ್ಥಳಗಳು: ಜ. 17 ರಂದು ಮಧ್ಯಾಹ್ನ 2 ಗಂಟೆಯಿಂದ ಜ. 18 ರ ಬೆಳಗ್ಗೆ 7 ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡದಂತೆ ನಿಷೇಧಿಸಿದೆ. ಅಂಬಲಪಾಡಿಯಿಂದ ಜೋಡುಕಟ್ಟೆಯವರೆಗೆ ಎರಡೂ ಬದಿಯಲ್ಲಿ. ಬ್ರಹ್ಮಗಿರಿಯಿಂದ ಬನ್ನಂಜೆವರೆಗೆ. ಲಯನ್ ಸರ್ಕಲ್‌ನಿಂದ ಮಿಷನ್ ಕಂಪೌಂಡ್‌ವರೆಗೆ. ಬೇತಲ್ ಚರ್ಚ್ನಿಂದ ಸಿಂಡಿಕೇಟ್ ಸರ್ಕಲ್‌ವರೆಗೆ, ಸಿಂಡಿಕೇಟ್ ಸರ್ಕಲ್‌ನಿಂದ ತ್ರಿವೇಣಿ ಜಂಕ್ಷನ್ ತನಕ. ಹನುಮಾನ್ ಜಂಕ್ಷನ್‌ನಿಂದ (ತ್ರಿವೇಣಿ ಜಂಕ್ಷನ್) ನಿಂದ ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್ ತನಕ. ಸಿಟಿ ಸೆಂಟರ್ ನಿಂದ, ಚಿತ್ರರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆಯ ತನಕ. ಐಡಿಯಲ್ ಜಂಕ್ಷನ್, ಎಲ್.ವಿ.ಟಿ ತೆಂಕಪೇಟೆ ದೇವಸ್ಥಾನ, ಪಿಪಿಸಿ ಕಾಲೇಜ್ ತನಕ. ಐಡಿಯಲ್ ಜಂಕ್ಷನ್‌ನಿಂದ ಹರಿಶ್ಚಂದ್ರ ಮಾರ್ಗ, ವಿದ್ಯೋದಯ ಶಾಲೆಯವರೆಗೆ. ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ. ಓಶಿಯನ್ ಪರ್ಲ್ ಹೊಟೇಲ್‌ನಿಂದ, ಕಟ್ಟೆ ಆಚಾರ್ಯ ಮಾರ್ಗ, ಮಥುರಾ ಹೊಟೇಲ್ ತನಕ. ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಿದೆ. ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್ ಲ್ಯಾಂಡ್ ಹೋಟೇಲ್‌ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

ಹೊರಕಾಣಿಕೆಯ ದಿನದಂದು ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಲಿರುವುದರಿಂದ ಸುಗಮ ಸಂಚಾರದ ಬಗ್ಗೆ ತ್ರಿವೇಣಿ ಜಂಕ್ಷನ್‌ನಿಂದ, ಸಂಸ್ಕೃತ ಕಾಲೇಜ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್ ತನಕ ಜ. 10 ರಿಂದ 18 ರ ಸಂಜೆ ತನಕ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

ಜ. 17 ರಂದು ಬೆಳಗ್ಗೆ 9 ಗಂಟೆಯಿಂದ ಜ. 18 ರ ಬೆಳಗ್ಗೆ 7 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.15: ಪರ್ಯಾಯ ದೀಪಾಲಂಕಾರ ಉದ್ಘಾಟನೆ; ಜ.16 ಕ್ಕೆ ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ

ಉಡುಪಿ, ಜ.14: ಶ್ರೀ ಶೀರೂರು ಮಠ ಪರ್ಯಾಯ ಮಹೋತ್ಸವದ ಪ್ರಯುಕ್ತ ನಗರದಲ್ಲಿ...

ಶೀರೂರು ಶ್ರೀ ಪ್ರಥಮ ಸರ್ವಜ್ಞಪೀಠಾರೋಹಣ ಸಫಲರಾಗಿಸೋಣ: ಶಾಸಕ ಯಶಪಾಲ್ ಸುವರ್ಣ

ಮುಂಬಯಿ, ಜ.13: ಉಡುಪಿ ಪರ್ಯಾಯ ವಿಶ್ವಕ್ಕೆ ಪ್ರಸಿದ್ಧವಾಗಿದೆ. ಈ ಬಾರಿಯ ಈ...

ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ

ಉಡುಪಿ, ಜ.14: ಅಲೆವೂರು ಗುಡ್ಡೆಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ...

ಶೋಷಿತ ಸಮಾಜದ ಪ್ರತಿಭೆಗಳಿಗೆ ಸರಕಾರ, ಸಮಾಜದ ಪ್ರೋತ್ಸಾಹ ಅಗತ್ಯ: ಡಾ.ವಿಜಯ ಬಲ್ಲಾಳ್

ಉಡುಪಿ, ಜ.13: ಪ್ರತಿಭೆಗೆ ಯಾವುದೇ ತಾರತಮ್ಯವಿಲ್ಲ. ಕಡು ಬಡವನಲ್ಲೂ ಪ್ರತಿಭೆ ಇರುತ್ತದೆ....
error: Content is protected !!