Saturday, January 3, 2026
Saturday, January 3, 2026

ಕನ್ನರ್ಪಾಡಿ: ಶೀರೂರು ಪರ್ಯಾಯ ಸಮಾಲೋಚನಾ ಸಭೆ

ಕನ್ನರ್ಪಾಡಿ: ಶೀರೂರು ಪರ್ಯಾಯ ಸಮಾಲೋಚನಾ ಸಭೆ

Date:

ಉಡುಪಿ, ಜ.2: ಕಳೆದ 36 ವರ್ಷಗಳಿಂದ ನಿರಂತರವಾಗಿ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪರ್ಯಾಯದ ಹೊರೆಕಾಣಿಕೆ ಅತ್ಯಂತ ವಿಜೃಂಭಣೆಯಿಂದ ಸಮರ್ಪಣೆಯಾಗಿದ್ದು ಈ ಬಾರಿಯ ಶೀರೂರು ಪರ್ಯಾಯಕ್ಕೂ ಶ್ರೀ ಕ್ಷೇತ್ರದಿಂದ ವೈಭವದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದು ಶ್ರೀ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಕೆ ಕೃಷ್ಣಮೂರ್ತಿ ಅಚಾರ್ಯ ಹೇಳಿದರು. ಅವರು ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಕನ್ನರ್ಪಾಡಿ ದೇವಸ್ಥಾನದ ಭಕ್ತವೃಂದ ಅಧಿಕ ಸಂಖ್ಯೆಯಲ್ಲಿ ಸೇರಿ ವೈಭವದ ಹೊರೆಕಾಣಿಕೆ ಸಮರ್ಪಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರ್ಯಾಯ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಮಾತನಾಡಿ, ಶೀರೂರು ಶ್ರೀ ವೇದವರ್ಧನ ತೀರ್ಥರ ಸಂಕಲ್ಪದಂತೆ ಶ್ರೀ ಕೃಷ್ಣ ದೇವರ ನೈವೇದ್ಯದ ಪ್ರತಿಯಾಗಿ ಪ್ರತಿ ಮನೆಯಿಂದ ಹದಿನಾಲ್ಕು ತೆಂಗಿನಕಾಯಿ ಸಮರ್ಪಣೆ ಸಹಿತ ಹೊರೆಕಾಣಿಕೆಯ ವಿವರಗಳನ್ನು ನೀಡಿದರು.

ಎ. ಸಂಜೀವ, ರಘುನಾಥ್ ಕೋಟ್ಯಾನ್, ನವೀನ್ ಶೆಟ್ಟಿ, ಜಯಕರ ಶೇರಿಗಾರ್, ಗುರುರಾಜ್ ಉಪಾಧ್ಯ, ಎಂ ರಾಜೇಂದ್ರ, ನಿರುಪಮ ಪ್ರಸಾದ್, ದಾಮೋದರ ಶೇರಿಗಾರ್, ವಿಷ್ಣು ಪ್ರಸಾದ್ ಪಾಡಿಗಾರ್, ರಘುನಾಥ್ ಕೋಟ್ಯಾನ್, ನಾರಾಯಣ ರಾವ್ ಕನ್ನರ್ಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪಾದಾಧಿಕಾರಿಗಳು ಉಪಸ್ಥಿತರಿದ್ದರು. ಸಂದೀಪ್ ಮಂಜ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ.3- ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ

ಜನವರಿ 3 ರಂದು ಭೂಮಿಗೆ ಸೂರ್ಯ ಚಂದ್ರರ ಬಲು ಅಪರೂಪದ ಸಂಗಮ....

ಪಂಚವರ್ಣ ಮಹಿಳಾ ಮಂಡಲ: ಅರಿವು ನಿಮ್ಮಗಿರಲಿ ನೆರವು ಮಾಲಿಕೆ

ಕೋಟ, ಜ.2: ಪ್ರತಿಯೊಬ್ಬರ ಆರೋಗ್ಯ ಅವರ ಅಂಗೈನಲ್ಲೆ ಇರುತ್ತದೆ ಆದರೆ ಅದರ...

ಅಧ್ಯಯನ ಭೇಟಿ

ಉಡುಪಿ, ಜ.2: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ...

ಮಡಾಮಕ್ಕಿ: ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ ಬಹಿರಂಗ ಹರಾಜು

ಉಡುಪಿ, ಜ.2: ಶಿಶು ಅಭಿವೃದ್ಧಿ ಯೋಜನೆ ಕುಂದಾಪುರದ ಮಡಾಮಕ್ಕಿ ಗ್ರಾಮ ಪಂಚಾಯತ್...
error: Content is protected !!