Sunday, July 26, 2026
Sunday, July 26, 2026

ಜನವರಿ 3: ಬೆಳ್ಮಣ್ ಮಂಡಲ ಪೂಜಾ ಮಹೋತ್ಸವ

ಜನವರಿ 3: ಬೆಳ್ಮಣ್ ಮಂಡಲ ಪೂಜಾ ಮಹೋತ್ಸವ

Date:

ಬೆಳ್ಮಣ್, ಡಿ.27: ಇತಿಹಾಸ ಪ್ರಸಿದ್ದ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವವು ಜನವರಿ 3 ರಂದು ಶನಿವಾರ ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಜನವರಿ 2ರಂದು ಶುಕ್ರವಾರ ಸಂಜೆ 4 ರಿಂದ ಬೆಳ್ಮಣ್ಣು ಅಯ್ಯಪ್ಪ ಭಕ್ತವೃಂದದ ಶಿಬಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಲಿದೆ.

ಜನವರಿ 3 ರಂದು ಶನಿವಾರ ಬೆಳಿಗ್ಗೆ ಘಂಟೆ 5.30ಕ್ಕೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಬೆಳಿಗ್ಗೆ ಘಂಟೆ 6.30ಕ್ಕೆ ಅಲಂಕಾರ ಪೂಜೆ, ಬೆಳಿಗ್ಗೆ ಘಂಟೆ 7.00ರಿಂದ ತುಲಾಭಾರ ಸೇವೆ, ಬೆಳಿಗ್ಗೆ ಘಂಟೆ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಘಂಟೆ 12.00ಕ್ಕೆ ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಧ್ಯಾಹ್ನ ಘಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3.00ರಿಂದ ಶ್ರೀ ಕ್ಷೇತ್ರದ ಆವರಣದಲ್ಲಿ ನಂದಳಿಕೆ ವಿಶಾಲ ಯಕ್ಷಕಲಾ ಬಳಗದವರಿಂದ ತಾಳಮದ್ದಳೆ ಕಾರ್ಯಕ್ರಮ, ಸಂಜೆ 6.00ರಿಂದ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೂಡ ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ವೈಜಯಂತಿ ಪರಿಣಯ” ಯಕ್ಷಗಾನ ಜರಗಲಿದೆ.

ರಾತ್ರಿ ಘಂಟೆ 7.00ರಿಂದ ಪ್ರಸನ್ನ ಪೂಜೆ, ಉತ್ಸವ ಬಲಿ ಹಾಗೂ ರಂಗಪೂಜೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ.ವಿಘ್ನೇಶ್ ಭಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!