Friday, February 27, 2026
Friday, February 27, 2026

ಜಾಗೃತ ಗ್ರಾಹಕರಿಂದ ಜಾಗೃತ ನ್ಯಾಯಯುತ ಸಮಾಜ ನಿರ್ಮಾಣ ಸಾಧ್ಯ: ಸುಮೀಲ ಟಿ ಮಾಸರೆಡ್ಡಿ

ಜಾಗೃತ ಗ್ರಾಹಕರಿಂದ ಜಾಗೃತ ನ್ಯಾಯಯುತ ಸಮಾಜ ನಿರ್ಮಾಣ ಸಾಧ್ಯ: ಸುಮೀಲ ಟಿ ಮಾಸರೆಡ್ಡಿ

Date:

ಉಡುಪಿ, ಡಿ.24: ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು, ದೋಷಪೂರಿತ ವಸ್ತುಗಳು ಮತ್ತು ಕೊರತೆಯಿಂದ ಕೂಡಿದ ಸೇವೆಗಳ ವಿರುದ್ಧ ಪರಿಹಾರ ಒದಗಿಸಲು ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸಲು 1986 ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರ ನೆನಪಿಗಾಗಿ ಪ್ರತಿ ವರ್ಷ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸುತ್ತೇವೆ. ವಿದ್ಯಾರ್ಥಿಗಳಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಇರುವುದು ಅಗತ್ಯ. ಆನ್‌ಲೈನ್ ಯುಗದಲ್ಲಿ ವಿದ್ಯಾರ್ಥಿಗಳೂ ಗ್ರಾಹಕರಾಗಿದ್ದಾರೆ. ಜಾಗೃತ ಗ್ರಾಹಕರಿಂದ ಜಾಗೃತ ಮತ್ತು ನ್ಯಾಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುಮೀಲ ಟಿ ಮಾಸರೆಡ್ಡಿ ಹೇಳಿದರು.

ಅವರು ನಗರದ ವಾದಿರಾಜ ರಸ್ತೆಯ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಬಳಕೆದಾರರ ವೇದಿಕೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತು ಅಥವಾ ಸೇವೆಗಳು ದೋಷಪೂರಿತವಾಗಿದ್ದ, ಆನ್‌ಲೈನ್ ಖರೀದಿಯಲ್ಲಿ ನಮಗೆ ಮೋಸ ವಂಚನೆ ನಡೆದಾಗ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿ ನಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯ ಮತ್ತು ಪರಿಹಾರ ಪಡೆದುಕೊಳ್ಳಬಹುದು. ಗ್ರಾಹಕರ ರಕ್ಷಣೆಗಾಗಿರುವ ಕಾಯ್ದೆಗಳ ಬಗ್ಗೆ ಶಿಕ್ಷಣ ಹೊಂದಿದಾಗ ಸಮಾಜದಲ್ಲಿ ಜಾಗೃತಿ ಮೂಡುತ್ತದೆ. ಗ್ರಾಹಕರನ್ನು ಮರಳು ಮಾಡುವ ಜಾಹೀರಾತುಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇರಬೇಕು. ನಮ್ಮ ಹಕ್ಕುಗಳ ಬಗ್ಗೆ ಅರಿವಿದ್ದಾಗ ಅನ್ಯಾಯಯುತ ವ್ಯಾಪಾರ ಪದ್ಧತಿಗಳಿಗೆ ಕಡಿವಾಣ ಹಾಕಬಹುದು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಮಾತನಾಡಿ, ಹಿಂದಿನ ಕಾಲದಲ್ಲಿ ಭೌತಿಕವಾಗಿ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತಿದ್ದೆವು. ಇದೀಗ ಡಿಜಿಟಲ್ ಯುಗದಲ್ಲಿ ಎಲ್ಲವನ್ನೂ ಆನ್‌ಲೈನ್ ಮೂಲಕ ಪಡೆಯುತ್ತಿದ್ದೇವೆ. ಖರೀದಿಯಲ್ಲಿ ನಡೆಯುವ ಯಾವುದೇ ರೀತಿಯ ಮೋಹಗಳಿಗೆ ಗ್ರಾಹಕರ ವೇದಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆರೋಗ್ಯ, ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಸೇವೆಯಲ್ಲಿ ನಡೆಯುವ ಅನ್ಯಾಯಗಳಿಗೂ ಗ್ರಾಹಕರ ನ್ಯಾಯಾಲಯದಲ್ಲಿ ಪರಿಹಾರ ದೊರೆಯುತ್ತದೆ. ಗ್ರಾಹಕರು ಇದರ ಬಗ್ಗೆ ಮಾಹಿತಿ ಹೊಂದಿ, ತಮ್ಮ ಹಕ್ಕುಗಳನ್ನು ಪಡೆಯಬೇಕು. ಡಿಜಿಟಲ್ ನ್ಯಾಯದಾನದ ಪ್ರಕ್ರಿಯೆಯಿಂದಾಗಿ ತ್ವರಿತಗತಿಯಲ್ಲಿ ನ್ಯಾಯದಾನ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ ಎನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬಳಕೆದಾರರ ವೇದಿಕೆ ಸಂಚಾಲಕ ಯುಜಿ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಶ್ಮಿ ಎಂ ತೇಲಿ ಸ್ವಾಗತಿಸಿ, ಬಳಕೆದಾರರ ವೇದಿಕೆ ವಿಶ್ವಸ್ಥರಾದ ಎಂ ರಾಮ ಭಟ್ ನಿರೂಪಿಸಿ, ಲಕ್ಷ್ಮಿ ಬಾಯಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಾ. 4: ಉಡುಪಿ ಕಂಬಳಕೆರೆಗೆ ಶಂಕುಸ್ಥಾಪನೆ

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ...

ಹಿರಿಯಡಕ: ಉದ್ಯೋಗ ಮೇಳ

ಹಿರಿಯಡಕ, ಫೆ.27: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಉದ್ಯೋಗ ಮಾಹಿತಿ...

ಹಲವಾರು ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಒಪ್ಪಂದ

ನವದೆಹಲಿ, ಫೆ.27: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕ ವಿನಿಮಯ, ಭೂಭೌತಿಕ ಪರಿಶೋಧನೆ,...

90,000 ಕೋಟಿ ರೂಪಾಯಿಗಳ ಒಪ್ಪಂದಗಳಿಗೆ ಜಪಾನ್ ಕಂಪನಿಗಳೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಹಿ

ಯು.ಬಿ.ಎನ್.ಡಿ., ಫೆ.27: ಉತ್ತರ ಪ್ರದೇಶ ಸರ್ಕಾರವು ಜಪಾನಿನ ವಿವಿಧ ಕಂಪನಿಗಳೊಂದಿಗೆ 90...
error: Content is protected !!