Saturday, January 17, 2026
Saturday, January 17, 2026

ಚೇತನಾ ಪ್ರೌಢಶಾಲೆ: ಪ್ರತಿಭಾ ಪುರಸ್ಕಾರ

ಚೇತನಾ ಪ್ರೌಢಶಾಲೆ: ಪ್ರತಿಭಾ ಪುರಸ್ಕಾರ

Date:

ಕೋಟ, ಡಿ.21: ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ ಭರತ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ 2026-27 ಜಿಲ್ಲಾ ಗವರ್ನರ್-ಬಿ.ಎಂ.ಭಟ್ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ನಗದು ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

ಶಾಲೆಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿನಿ ವೈಷ್ಣವಿ ಹಾಗೂ ದ್ವಿತೀಯ ಸ್ಥಾನಿ ವಿದ್ಯಾರ್ಥಿನಿ ಪೂರ್ವಿ ಇವರಿಗೆ ಮನಸ್ವಿನಿ ಮಂಗಳೂರು ಇಲ್ಲಿನ ಮನೋರೋಗತಜ್ಞ ಡಾ. ರವೀಶ್ ತುಂಗಾ ಪ್ರತಿ ವರ್ಷವೂ ಕೊಡ ಮಾಡುತ್ತಿರುವ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕವನ್ನು ನೀಡಿ ಪುರಸ್ಕರಿಸಲಾಯಿತು. ಸಾಧಕ ವಿದ್ಯಾರ್ಥಿನಿಗೆ ಶುಭದ ವೇದವ್ಯಾಸ ಆಚಾರ್ಯ ತಮ್ಮ ಪತಿ ಬಾಳ್ಕುದ್ರು ವೇದವ್ಯಾಸ ಆಚಾರ್ಯರ ಸ್ಮರಣಾರ್ಥ ಹತ್ತು ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಿದರು. ಶಾಲೆಯ ಅಂದಿನ ವಿದ್ಯಾರ್ಥಿನಿ ಸುಮಿತ್ರಾ ಗಾಣಿಗ ಇವರು ತಲಾ ರೂ.5,000/- ಸಹಾಯ ನಿಧಿಯನ್ನು ನೀಡಿದರು.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕ್ರೀಡಾ ಸಾಧಕರಿಗೆ ಹಾಗೂ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ದತ್ತಿ ನಿಧಿ ವಿತರಣಾ ಕಾರ್ಯಕ್ರಮ ಸೇರಿದಂತೆ ಶಾಲೆಯ ಅಂದಿನ ವಿದ್ಯಾರ್ಥಿಗಳಾದ ವಿಶ್ವನಾಥ ಅಲ್ಸೆ, ಸಿ ಎಚ್ ರೆಹಮಾನ್ ಸಾಹೇಬ್, ಕುಮಾರಿ ಸುಮಿತ್ರ ಗಾಣಿಗ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎಚ್ ಇಬ್ರಾಹಿಂ ಸಾಹೇಬ್, ರೋಟರಿ ರಾಯಲ್ ಬ್ರಹ್ಮಾವರ ಅಧ್ಯಕ್ಷ ಚಂದ್ರಶೇಖರ ನಾಯರಿ, ಶುಭದ ವೇದವ್ಯಾಸ ಆಚಾರ್ಯ ಬೆಂಗಳೂರು, ಸಿ ಎಚ್. ರೆಹಮನ್ ಸಾಹೇಬ್, ದಿವಾಕರ್ ಶೆಟ್ಟಿ, ಸುಮಿತ್ರ ಗಾಣಿಗ, ವಿಶ್ವನಾಥ ಅಲ್ಸೆ, ಶಾಲಾ ವಿದ್ಯಾರ್ಥಿ ನಾಯಕ ಮನ್ವಿತ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಸ್ವಾಗತಿಸಿ ಶೈಕ್ಷಣಿಕ ಚಟುವಟಿಕೆಗಳ ವರದಿ ವಾಚಿಸಿದರು. ಅಧ್ಯಾಪಕ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹರ್ಷವರ್ಧನ ಶೆಟ್ಟಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!