ಉಡುಪಿ, ನ.15: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ 100ನೇ ಜನ್ಮದಿನಾಚರಣೆಯ ಅಂಗವಾಗಿ ಉಡುಪಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಇವರು ಉಡುಪಿಯ ಗಾಂಧಿ ಆಸ್ಪತ್ರೆ, ಮಣಿಪಾಲದ ಕೆಎಂಸಿ ಆಸ್ಪತ್ರೆ, ದಿ ಆಸೋಸಿಯೆಷನ್ ಓಫ್ ಫಿಸಿಶಿಯಾನ್ ಓಫ್ ಇಂಡಿಯ(ಉಡುಪಿ-ಮಣಿಪಾಲ ಚಾಪ್ಟರ್, ಶ್ರೀ ಕೃಷ್ಣ ಯೋಗ ಕೇಂದ್ರ ಉಡುಪಿ, ಹಾಗೂ ಹಿರಿಯ ನಾಗರಿಕರ ವೇದಿಕೆ ಉಡುಪಿ ಇವರ ಸಹಕಾರದೊಂದಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಆನಂದ ಕುಂದಾಪುರ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ 9:30ಯಿಂದ ಅಪರಾಹ್ನ 1.30 ರ ತನಕ ಜರುಗಿದ ಈ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 157 ಹಿರಿಯ ನಾಗರಿಕರು ಭಾಗವಹಿಸಿದ್ದರು. ತಪಾಸಣಾ ಶಿಬಿರದ ಯಶಸ್ವಿಗಾಗಿ ಎ.ಪಿ.ಐ. ಅಧ್ಯಕ್ಷರಾದ ಡಾ. ಸುರೇಶ್ ಹೆಗ್ಡೆ, ಎ.ಪಿ.ಐ. ಕಾರ್ಯದರ್ಶಿ ಡಾ. ಅನಂತ ಶೆಣೈ, ಎ.ಪಿ.ಐ. ಮಾಜಿ ಆಧ್ಯಕ್ಷರಾದ ಡಾ. ಶಿವಶಂಕರ್ ಕೆ. ಎನ್., ಡಾ. ಕಸ್ತೂರಿ ನಾಯಕ್ ಹಾಗೂ ಇತರ ವೈದ್ಯರು ಮತ್ತು 20 ಜನ ಅರೆ ವೈದ್ಯಕೀಯ ಸಿಬ್ಬಂದಿಗಳು ಸೇವೆ ನೀಡಿದರು. ಶ್ರೀ ಕೃಷ್ಣ ಯೋಗ ಕೇಂದ್ರದ ಅಮಿತ್ ಶೆಟ್ಟಿ ಹಾಗೂ ಹಿರಿಯ ನಾಗರಿಕರ ವೇದಿಕೆಯ ಮುರಳಿಧರ್, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಹರಿಶ್ಚಂದ್ರ ಎಮ್., ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಉಪಸ್ಥಿತರಿದ್ದರು.




By
ForthFocus™