Friday, July 31, 2026
Friday, July 31, 2026

ನ.22: ಇಂದ್ರಾಳಿಯಲ್ಲಿ ಹಕ್ಕಿ ವೀಕ್ಷಣೆ

ನ.22: ಇಂದ್ರಾಳಿಯಲ್ಲಿ ಹಕ್ಕಿ ವೀಕ್ಷಣೆ

Date:

ಉಡುಪಿ, ನ.13: ಉಡುಪಿಗೆ ಬನ್ನಿ ತಂಡದ ನೇತೃತ್ವದಲ್ಲಿ ನವೆಂಬರ್ 22 ಶನಿವಾರ ಸಂಜೆ 4 ಗಂಟೆಯಿಂದ 5.30 ಗಂಟೆಯವರೆಗೆ ಉಡುಪಿ ತಾಲೂಕಿನ ಇಂದ್ರಾಳಿಯಲ್ಲಿ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅಕ್ಟೋಬರ್ 25 ರಂದು ಬ್ರಹ್ಮಾವರ ತಾಲೂಕಿನ ಹೇರೂರಿನಲ್ಲಿ ಹಕ್ಕಿ ವೀಕ್ಷಣೆಯ ಮೊದಲ ಕಾರ್ಯಕ್ರಮ ನಡೆದಿದ್ದು ಪರಿಸರ ಆಸಕ್ತರು 32 ಪ್ರಬೇಧಗಳ 65 ಹಕ್ಕಿಗಳನ್ನು ಪಟ್ಟಿ ಮಾಡಿದ್ದಾರೆ. ಹಕ್ಕಿ ವೀಕ್ಷಣೆ ಮನಸ್ಸಿಗೆ ಮುದ ನೀಡುವ ಹವ್ಯಾಸ ಮಾತ್ರವಲ್ಲದೇ, ನಿಸರ್ಗದ ಜತೆ ಬೆರೆತು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು ಇಂಧನ ಒದಗಿಸುತ್ತದೆ.

ಯಾರು ಭಾಗವಹಿಸಬಹುದು? ಹಕ್ಕಿ ವೀಕ್ಷಣೆಯಲ್ಲಿ ಆಸಕ್ತಿ ಇರುವವರು, ಛಾಯಾಗ್ರಾಹಕರು, ಬ್ಲಾಗ್ ರಚಿಸುವವರು ಹಾಗೂ ಪರಿಸರ ಪ್ರೇಮಿಗಳು ಹಕ್ಕಿ ವೀಕ್ಷಣೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಭಾಗವಹಿಸುವವರು ಗೂಗಲ್ ಫಾರ್ಮ್ ಲಿಂಕ್ https://forms.gle/6os6k4JaFrRD4hiMA ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕ್ರೀಡಾ ಇಲಾಖೆ ವಿವಿಧ ಯೋಜನೆ: ಅರ್ಜಿ ಅವಧಿ ವಿಸ್ತರಣೆ

ಉಡುಪಿ, ಜು.30: 2025ನೇ ಸಾಲಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ...

ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜು.30: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ-ಉದ್ಯಮ...

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಕೋಟ, ಜು.30: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆಯು ಮಂಗಳವಾರ...

ಬಾರ್ಕೂರು: ‘ಸಾಹಿತ್ಯ ಮತ್ತು ಜೀವನ ದರ್ಶನ’ ವಿಶೇಷ ಉಪನ್ಯಾಸ

ಬಾರ್ಕೂರು, ಜು.30: ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ...
error: Content is protected !!