ಉಡುಪಿ, ಅ.10: ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಸಾಹಿತ್ಯ ಕೃಷಿ ಆರಂಭಿಸಿದ ಡಾ. ಶಿವರಾಮ ಕಾರಂತರು ಈ ನೆಲದ ಸಂಸ್ಕೃತಿಯನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಇಂದಿನಯುವ ಜನಾಂಗ ಅಧ್ಯಯನ ಮಾಡಿದಲ್ಲಿ ಅವರಿಗೆ ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗಬಹುದು ಎಂದು ಮಾಹೆಯ ಗಾಂಧಿ ಅಧ್ಯಾಯನ ಕೇಂದ್ರ ನಿರ್ದೇಶಕ ಡಾ ವರದೇಶ್ ಹಿರೇಗಂಗೆ ಹೇಳಿದರು. ಅವರು ಕನ್ನಡ ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ಯುವ ಬರಹಗಾರರ ಸಮಾವೇಶ ಮತ್ತು ಕಾರಂತ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಕೆ ಶ್ರೀಧರ್ ಪೈ, ಆಡಳಿತ ಅಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಅವರು ಕಾರಂತರ ಬಹುಮುಖ ಪ್ರತಿಭೆ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯವಾಗಲು ಈ ಶಿಬಿರ ಪೂರಕವಾಗಿದೆ ಎಂದುಶುಭಹಾರೈಸಿದರು. ಡಾ ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಆಶಯ ನುಡಿಗಳನ್ನು ಹೇಳಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಬರಹಗಾರ್ತಿ ಸುಧಾ ಆಡುಕಳ ಮತ್ತು ಪತ್ರಕರ್ತ ನಿತ್ಯಾನಂದ ಪಡ್ರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು ಪ್ರಸೀಜ, ಪ್ರಜ್ಞಾ, ಭೂಮಿಕ ತಂಡದವರು ನಾಡಗೀತೆಯನ್ನು ಹಾಡಿದರು. ಪೂರ್ಣಿಮಾ ಸ್ವಾಗತಿಸಿ ಪ್ರಜ್ಞಾ ವಂದಿಸಿದರು. ಮಧುರ ಕಾರ್ಯಕ್ರಮ ನಿರೂಪಿಸಿದರು.




By
ForthFocus™