ಉಡುಪಿ, ಅ.7: ಕಲ್ಯಾಣಪುರ ಗ್ರಾ. ಪಂ. ವ್ಯಾಪ್ತಿಯ ‘ಪಕ್ಕಿಬೆಟ್ಟು-ಗರೋಡಿಗೆ’ ಹೋಗುವ ದಾರಿಯಲ್ಲಿ ‘ಬಬ್ಬುಸ್ವಾಮಿ ದೈವದ ಗುಡಿ ಬಳಿ ಶಿಲೆಯೊಂದು ದೊರೆತಿದ್ದು ಸೂರ್ಯ -ಚಂದ್ರ, ಉಬ್ಬುಶಿಲ್ಪದ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.
ಸಮಾಜ ಸೇವಕರಾದ ಅಪ್ಪು ಟೈಲರ್ ಹಾಗೂ ಅವಿನಾಶ್ ಪಕ್ಕಿಬೆಟ್ಟು ಇವರು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.. ಎಸ್. ಎ. ಕೃಷ್ಣಯ್ಯ ಹಾಗೂ ಹವ್ಯಾಸಿ ಇತಿಹಾಸ ಸಂಶೋಧಕ ಸದಸ್ಯ, ಉಡುಪಿ, ಕಡಿಯಾಳಿಯ ಯು. ಕ. ಬಾಯ್ ಪ್ರೌ. ಶಾ. ನಿವೃತ್ತ ಅಧ್ಯಾಪಕ ಕೆ. ಶ್ರೀಧರ ಭಟ್, ಕಲ್ಯಾಣಪುರ ಇವರಿಗೆ ಮಾಹಿತಿಗಳನ್ನು ನೀಡಿ ಸಹಕರಿಸಿದ್ದಾರೆ. ‘ಮೇಲ್ನೋಟಕ್ಕೆ ಇದು 17ನೇ ಶತಮಾನದ ಕೆಳದಿ ಕಾಲದೆಂದು ಕಂಡುಬಂದರೂ ನಿಖರತೆಗಾಗಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದು. ಇಂತಹ ಅವಶೇಷಗಳು, ಪುರಾತತ್ವ ಮಾಹಿತಿಗಳು ದೊರಕಿದಲ್ಲಿ ಇತಿಹಾಸ ಸಂಶೋಧಕರಿಗೆ ಪೂರಕ ಮಾಹಿತಿಗಳನ್ನು ಒದಗಿಸುವುದರ ಮೂಲಕ ಸಹಕರಿಸಬೇಕೆಂದು ಶ್ರೀಧರ್ ಭಟ್ ಹೇಳಿದ್ದಾರೆ.




By
ForthFocus™