ಮಣಿಪಾಲ, ಅ.5: ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಮಣಿಪಾಲದ ಕೆ.ಎಂ.ಸಿ.ಗ್ರೀನ್ಸ್ ಆವರಣದಲ್ಲಿ ವಿಶ್ವ ರೇಬಿಸ್ ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರು ರೇಬಿಸ್ ಜಾಗೃತಿ ಕಲಾಕೃತಿಯನ್ನು ಅನಾವರಣಗೊಳಿಸಿದರು. ರೇಬಿಸ್ ಕುರಿತು ಜಾಗೃತಿ ಮೂಡಿಸುವಂತಹ ಘೋಷವಾಕ್ಯಗಳನ್ನು ಕೆ.ಎಂ.ಸಿ.ಯ ವೈದ್ಯಕೀಯ ಮತ್ತು ವೈದ್ಯಕೇತರ ಸಿಬ್ಬಂದಿಗಳು ಪ್ರದರ್ಶಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಈಶ್ವರೀ ಕೆ. ಅವರು ರೇಬಿಸ್ ಕುರಿತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರೊ ಡಾ. ಮುರಳೀಧರ್ ಎಂ. ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಣಿಪಾಲ: ವಿಶ್ವ ರೇಬಿಸ್ ಜಾಗೃತಿ ದಿನ
ಮಣಿಪಾಲ: ವಿಶ್ವ ರೇಬಿಸ್ ಜಾಗೃತಿ ದಿನ
Date:




By
ForthFocus™