ಕೋಟ, ಸೆ.28: ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಜಯದುರ್ಗಾಪರಮೇಶ್ವರಿ ದೇವಿಗೆ ಶರನ್ನವರಾತ್ರಿ ಪ್ರಯುಕ್ತ ವೇ.ಮೂ ರಾಜೇಂದ್ರ ಅಡಿಗ ನೇತೃತ್ವದಲ್ಲಿ ದುರ್ಗಾಯಾಗ ನಡೆಯಿತು. ಸೇವಾಕರ್ತರಾಗಿ ಪಿಡಬ್ಲೂಡಿ ಗುತ್ತಿಗೆದಾರ ಶೇವಧಿ ಸುರೇಶ್ ಗಾಣಿಗ ದಂಪತಿಗಳು ಭಾಗಿಯಾಗದರು. ಸಪ್ತಶತಿ ಪಾರಾಯಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.. ದೇಗುಲದ ಅರ್ಚಕರಾದ ವೇ.ಮೂ ಸದಾಶಿವ ಅಡಿಗ, ತೀರ್ಥೇಶ್ ಭಟ್, ಮಾಜಿ ಟ್ರಸ್ಟಿ ಜಿ.ಎಸ್ ಆನಂದ್ ದೇವಾಡಿಗ, ದೇಗುಲದ ಆಡಳಿತ ಮಂಡಳಿ, ಅರ್ಚಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
ಹಿರೇಮಹಾಲಿಂಗೇಶ್ವರ ದೇವಸ್ಥಾನ: ದುರ್ಗಾಹೋಮ
ಹಿರೇಮಹಾಲಿಂಗೇಶ್ವರ ದೇವಸ್ಥಾನ: ದುರ್ಗಾಹೋಮ
Date:




By
ForthFocus™