ಕೋಟ, ಸೆ.23: ಸ್ವಚ್ಚತಾ ಹೀ ಸೇವಾ-೨೦೨೫ ಪ್ರಯುಕ್ತ ಮತ್ತು ಅಂತರಾಷ್ಟ್ರೀಯ ಕೋಸ್ಟಲ್ ಕ್ಲೀನ್ ಅಪ್ ಡೇ ಅಂಗವಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕ್ರೆ ಬೀಚ್ ಸ್ವಚ್ಚತೆ ಕಾರ್ಯಕ್ರಮ ನಡೆಯಿತು. ಆಶ್ರಿತ್ ನರ್ಸಿಂಗ್ ಕಾಲೇಜು, ಕೋಟ ಪ್ರಾಧ್ಯಾಪಕರು ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿ ಮೆಲ್ವಿನ್ ಮಸ್ಕರೇನಸ್ ಹಾಗೂ 160 ವಿದ್ಯಾರ್ಥಿಗಳು ಪಾಂಚಜನ್ಯ ಸಂಘ ಅಂಬಾಗಿಲು ಕೆರೆರಸ್ತೆ, ಪಾರಂಪಳ್ಳಿ ಹಂದಟ್ಟು, ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಹಾಗೂ ತಂಡ, ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಪಡುಕರೆ, ಕರಾವಳಿ ಫ್ರೆಂಡ್ಸ್ ಪಾರಂಪಳ್ಳಿ, ಕೆನರಾ ಬ್ಯಾಂಕ್ ಸಾಲಿಗ್ರಾಮ ಸಿಬ್ಬಂದಿ ಕೇಶವ ಮತ್ತು ಪಟ್ಟಣ ಪಂಚಾಯತ್‌ನ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ, ಕಂದಾಯ ನಿರೀಕ್ಷಕ ಚಂದ್ರಶೇಖರ ಸೋಮಯಾಜಿ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಂಘ ಸಂಸ್ಥೆಯವರಿಗೆ ಪಟ್ಟಣ ಪಂಚಾಯತ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ, ಪಟ್ಟಣ ಪಂಚಾಯತ್‌ನ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ಸದಸ್ಯರಾದ ಸಂಜೀವ ದೇವಾಡಿಗ ಇದ್ದರು.
ವಿವಿಧ ಯೋಜನೆಗಳಿಗೆ ಚಾಲನೆ: 2024ರಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ 2.0 (ಹೌಸಿಂಗ್ ಪಾರ್ ಆಲ್) ಸರ್ವರಿಗೂ ಸೂರು ಎಂಬ ಯೋಜನೆಯ ಅಂಗೀಕಾರ – 2025 ಜನಜಾಗ್ರತಿ ಅಭಿಯಾನ ಹಾಗೂ ಪಿಎಂಎವೈ ಯು ಆವಾಸ್ ದಿವಸ್ ಮತ್ತು ಪಿ.ಎಂ ಆವಾಸ್ ಮೇಳ ಶಹರಿ ಅಂಗೀಕಾರ್ ಆಂದೋಲನಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ಹಸಿರು ನಿಶಾನೆ ತೋರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.




By
ForthFocus™