Wednesday, September 30, 2026
Wednesday, September 30, 2026

ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

Date:

ಉಡುಪಿ, ಸೆ.22: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ-ಸಹಾಯಧನ ಯೋಜನೆಯಡಿ ವೆಬ್‌ಸೈಟ್ http://www.ksbdb.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹಸು ಸಾಕಾಣಿಕೆ, ಗುಡಿ ಹಾಗೂ ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ನಡೆಸಲು ಶೇ.4 ರ ವಾರ್ಷಿಕ ಬಡ್ಡಿ ದರದಲ್ಲಿ 1 ಲಕ್ಷದವರೆಗಿನ ಘಟಕ ವೆಚ್ಚ ಹೊಂದಿರುವ ವ್ಯಾಪಾರಕ್ಕೆ 20,000 ರೂ ಸಹಾಯಧನ ಮತ್ತು 80,000 ರೂ ಉಳಿಕೆ ಸಾಲದ ಮೊತ್ತ ಹಾಗೂ 2 ಲಕ್ಷದವರೆಗಿನ ಘಟಕ ವೆಚ್ಚ ಹೊಂದಿರುವ ವ್ಯಾಪಾರಕ್ಕೆ 40,000 ರೂ ಸಹಾಯಧನ ಮತ್ತು 1,60,000 ರೂ ಉಳಿಕೆ ಸಾಲದ ಮೊತ್ತದೊಂದಿಗೆ ಆರ್ಥಿಕ ನೆರವು ನೀಡಲಾಗುವುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 8762249230 ಅಥವಾ 8029605888 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ.ಶ್ರೀಪಾದ್ ಭಟ್

ಉಡುಪಿ, ಸೆ.29: ಅಂಬೇಡ್ಕರ್ ರವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ...

ಮಣಿಪಾಲ ಜ್ಞಾನಸುಧಾ: ಎನ್.ಎಸ್. ಎಸ್ ದಿನಾಚರಣೆ

ಮಣಿಪಾಲ, ಸೆ.29: ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್. ಎಸ್...

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ

ಉಡುಪಿ, ಸೆ.29: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ,...

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು: ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ

ಧಾರವಾಡ, ಸೆ.29: ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು...
error: Content is protected !!