ಉಡುಪಿ, ಸೆ.13: ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ಉಡುಪಿ ಜಿಲ್ಲೆಯ ಮಹಿಳೆಯರ ಸಭೆ ಶೀರೂರು ಮಠದಲ್ಲಿ ನಡೆಯಿತು. ಶ್ರೀ ವೇದವರ್ಧನ ಶ್ರೀಪಾದರು ಆಶೀರ್ವಚನವನ್ನು ನೀಡಿ, ಶೀರೂರು ಪರ್ಯಾಯ ಕೃಷ್ಣಭಕ್ತರ ಪರ್ಯಾಯ. ನಮ್ಮ ನಿಮ್ಮೆಲ್ಲರ ಪರ್ಯಾಯ ಎಲ್ಲರೂ ಒಟ್ಟಾಗಿ ಕೃಷ್ಣ ಸೇವೆಯಲ್ಲಿ ಭಾಗಿಯಾಗೋಣ ಎಂದರು. ದಿವಾನರಾದ ಉದಯಕುಮಾರ್ ಸರಳತ್ತಾಯ ಮಾತನಾಡಿ, ಪರ್ಯಾಯದ ಸಂದರ್ಭದಲ್ಲಿ ಮಾತ್ರ ಕೃಷ್ಣನ ಸೇವೆ ಮಾಡುವುದಲ್ಲ ಶೀರೂರು ಪರ್ಯಾಯ ಎರಡು ವರ್ಷವೂ ಕೃಷ್ಣನಸೇವೆ ಮಾಡಬೇಕು. ಮುಖ್ಯವಾಗಿ ಮಹಿಳೆಯರು ಕೃಷ್ಣ ಸೇವೆಯಲ್ಲಿ ತೊಡಗಿಸಿಕೊಂಡರೆ ಲೋಕಕ್ಕೆ ಒಳಿತಾಗುವುದು ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಹಿಳಾ ವಿಭಾಗ ಕಾರ್ಯವೈಕರಿ ಬಗ್ಗೆ ತಿಳಿಸಿದರು ಮತ್ತು ಮಹಿಳಾ ವಿಭಾಗದ ಸಂಚಾಲಕರ ಹೆಸರುಗಳನ್ನು ಘೋಷಿಸಿದರು. ಮಹಿಳಾ ಸಂಚಾಲಕರುಗಳಾಗಿ ಪದ್ಮ ರತ್ನಾಕರ್, ನಯನ ಗಣೇಶ್, ವೀಣ ಎಸ್ ಶೆಟ್ಟಿ, ವಸಂತಿ ರಾವ್ ಕೊರಡ್ಕಲ್ , ಜ್ಯೋತಿ ಹೆಬ್ಬಾರ್, ಸಹ ಸಂಚಾಲಕರುಗಳಾಗಿ ತಾರ ಆಚಾರ್ಯ, ಸಂಧ್ಯಾ ರಮೇಶ್, ಶೋಭಾ ಉಪಾದ್ಯಾಯ, ಪದ್ಮಲತಾ ಎಂ ಎಸ್, ಭಾರತಿ, ದಿವ್ಯಾ ವಿ ಪ್ರಸಾದ್, ನೀತಾ ಪ್ರಭು, ಮಮತ ಶೆಟ್ಟಿ, ನಳಿನಿ ಪ್ರದೀಪ್, ಮೀನಾಕ್ಷಿ ಬನ್ನಂಜೆ, ಮಾಯ ಕಾಮತ್, ಇಂದಿರಾ ಶಶಿಧರ್, ಸುಮಂಗಲ, ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, ಅನ್ನಬ್ರಹ್ಮನ ಕ್ಷೇತ್ರದಲ್ಲಿ ಸೇವೆ ಮಾಡಿ ಊರ ಪರವೂರ ಭಕ್ತರಿಗೆ ಉತ್ತಮ ಆತಿಥ್ಯ ನೀಡಬೇಕು. ಮಹಿಳೆಯರು ಪರ್ಯಾಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸ್ವಾಗತ ಸಮಿತಿಯ ಕೋಶಾಧಿಕಾರಿಗಳಾದ ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿಗಳಾದ ಮೋಹನ್ ಭಟ್, ಜೊತೆ ಕಾರ್ಯದರ್ಶಿಗಳಾದ ಸಂದೀಪ್ ಮಂಜ, ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ನಿರೂಪಿಸಿ ವಂದಿಸಿದರು.




By
ForthFocus™