Sunday, March 22, 2026
Sunday, March 22, 2026

ವಿದೇಶಕ್ಕೆ ಅಧ್ಯಯನಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ

ವಿದೇಶಕ್ಕೆ ಅಧ್ಯಯನಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಶುಭ ಸುದ್ಧಿ

Date:

ಉಡುಪಿ, ಆ.13: ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾರದರ್ಶಕ, ಮೌಲ್ಯಾಧಾರಿತ ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನು ನೀಡುವ ಮೂಲಕ ಜಾಗತಿಕ ಶಿಕ್ಷಣದ ಪ್ರಯಾಣವನ್ನು ಸರಳೀಕರಿಸಲು ಮತ್ತು ಸುರಕ್ಷಿತಗೊಳಿಸಲು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ವಿದೇಶದಲ್ಲಿ ಅಧ್ಯಯನ- 2025 ಕಾರ್ಯಕ್ರಮವನ್ನು ಆಗಸ್ಟ್ 17 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರ ವರೆಗೆ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮಲ್ಲಿ 10 ಕ್ಕೂ ಹೆಚ್ಚು ರಾಷ್ಟ್ರಗಳ, 50 ಕ್ಕೂ ಮೇಲ್ಪಟ್ಟ ಜಾಗತಿಕ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಮುಂದುವರೆಸಲು ಆಸಕ್ತಿಯುಳ್ಳವರು ಬೆಂಗಳೂರಿನಲ್ಲಿ ನಡೆಯುವ “ವಿದೇಶದಲ್ಲಿ ಅಧ್ಯಯನ- 2025 ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಜಿಲ್ಲೆಯಾದ್ಯಂತ ಅರ್ಹ ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 16 ರ ಒಳಗಾಗಿ ಲಿಂಕ್ https://studyabroad.ksdckarnataka.com/ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಸಾವರಿ ಶಾನಭಾಗ್ ನಿಧನ

ಕುಂದಾಪುರ, ಮಾ.22: ಕುಂದಾಪುರದ ಸದಾರಂಗ ಸಂಗೀತ ವಿದ್ಯಾಲಯದ ಸಂಸ್ಥಾಪಕರು ಆಲ್ ಇಂಡಿಯಾ...

ಮಾ. 24, ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಮಾ.21: ಮೆಸ್ಕಾಂ ಕಾಪು ಉಪವಿಭಾಗ ಕಛೇರಿಯಲ್ಲಿ ಮಾರ್ಚ್ 24 ರಂದು...

ಪ್ರಸಾದ ಎಸಳು ಚರ್ಚಾಗೋಷ್ಠಿ

ಮಂಗಳೂರು, ಮಾ.21: ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ 'ಪ್ರಸಾದ ಎಸಳು'...

ಸರಕಾರಿ ಯೋಜನೆಗಳು ಫಲಾನುಭವಿಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಮಾ.21: 2025–26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ...
error: Content is protected !!