Monday, January 19, 2026
Monday, January 19, 2026

ಉಪ್ಪೂರು: ಆಟಿದ ನೆಂಪು

ಉಪ್ಪೂರು: ಆಟಿದ ನೆಂಪು

Date:

ಉಪ್ಪೂರು, ಜು.28: ರಜತ ಸಂಭ್ರಮದಲ್ಲಿರುವ ಕೊಳಲಗಿರಿ ಯುವವಿಚಾರ ವೇದಿಕೆ (ರಿ) 21ನೇ ಕಾರ್ಯಕ್ರಮವಾಗಿ “ಆಟಿದ ನೆಂಪು ತಿನಸುದ ತಂಪು” ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ದೈವಾರಾಧಕರಾದ ಮುಖ್ಯ ಅತಿಥಿ ಪಡ್ಡಂ ಸಂಜೀವ ಪಾಣರವರಿಂದ ಯುವ ವಿಚಾರ ವೇದಿಕೆಯಲ್ಲಿ ಉದ್ಗಾಟನೆಗೊಂಡು, ಪಂಚಾಯತ್ ಸದಸ್ಯೆ ಸರೋಜ ಸನಿಲ್, ಸಾಕ್ಸೋಪೋನ್ ವಾದಕ ಪಾಂಡುರಂಗ ಪಡ್ಡಮ್, ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಮಾಧವ ಪಾಣ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಮೇಶ ಕರ್ಕೇರಾ ಉಪಸ್ಥಿತಿಯಲ್ಲಿ ಜರುಗಿತು.

ಉಪ್ಪೂರು ಗ್ರಾಮದಲ್ಲಿ ಹಲವಾರು ಗರ್ಭಿಣಿಯರಿಗೆ ಪ್ರಸೂತಿ ಮಾಡಿಸಿದ್ದ ನರ್ನಾಡು ಗುಲಾಬಿ ಮಡಿವಾಳ್ತಿ ಹಾಗೂ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದ ಶಕುಂತಳ ರವರನ್ನು ಸನ್ಮಾನಿಸಲಾಯಿತು. 40 ಬಗೆಯ ವಿವಿಧ ಗ್ರಾಮೀಣ ಸೊಗಡಿನ ಖಾದ್ಯಗಳನ್ನು ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ವಿವಿಧ ಗ್ರಾಮೀಣ ಸಂಸ್ಕೃತಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಜಯಲಕ್ಷ್ಮಿ ಪ್ರಾರ್ಥನೆ ನೆರವೇರಿಸಿದರು. ಶಾಂತ ಸೆಲ್ವರಾಜ ಸ್ವಾಗತಿಸಿ, ಯೋಗೀಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿ ಶಕುಂತಳಾ ವಂದಿಸಿದರು. ಪುಷ್ಪಲತಾ ನರ್ಸರಿಯ ಮಾಲೀಕರಾದ ಕೇಶವ್ ರವರಿಂದ ಗಿಡ ಮರಗಳಿಂದ ರೂಪುಗೊಂಡ ಆಕರ್ಷಕ ಹಸಿರು ನೈಜ ಅಲಂಕಾರ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಬ್ರಿ: ಆಳುಪ ನಾಗದೇವರಸನ ಶಾಸನದ ಅಧ್ಯಯನ

ಹೆಬ್ರಿ, ಜ.18: ತಾಲೂಕಿನ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಬಾಡಿ ಪ್ರದೇಶದ...

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ

ಉಡುಪಿ, ಜ.18: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ...

ಸರಸ್ವತಿ ವಿದ್ಯಾಲಯ: ರಾಷ್ಟ್ರೀಯ ಯುವ ದಿನಾಚರಣೆ

ಗಂಗೊಳ್ಳಿ, ಜ.18: ಸ್ವಾಮಿ ವಿವೇಕಾನಂದರ ಜೀವನವನ್ನು ಅವಲೋಕಿಸುವ ಮೂಲಕ ನಾವು ನಮ್ಮ...

ಶಿವಯೋಗಿ ಸಿದ್ಧರಾಮರ ಕಾಯಕದ ಮಹತ್ವ ಪ್ರತಿಯೊಬ್ಬರೂ ಪಾಲಿಸುವಂತಾಗಲಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಜ.18: ಕಾಯಕದ ಮಹತ್ವವನ್ನು ತಿಳಿಸಿದ ಶಿವಯೋಗಿ ಸಿದ್ದರಾಮರ ತತ್ವ ಆದರ್ಶಗಳನ್ನು...
error: Content is protected !!