Saturday, February 7, 2026
Saturday, February 7, 2026

ಬ್ರಿಟನ್ ಜೊತೆ ವ್ಯಾಪಾರ ಒಪ್ಪಂದದ ಮೂಲಕ ಮೀನುಗಾರಿಕೆ ಉತ್ಪನ್ನಗಳಿಗೆ ಸುಂಕ ಮನ್ನಾ ಒದಗಿಸಿ ಮೀನುಗಾರಿಕೆಗೆ ಶಕ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ: ಯಶ್ಪಾಲ್ ಸುವರ್ಣ ಅಭಿನಂದನೆ

ಬ್ರಿಟನ್ ಜೊತೆ ವ್ಯಾಪಾರ ಒಪ್ಪಂದದ ಮೂಲಕ ಮೀನುಗಾರಿಕೆ ಉತ್ಪನ್ನಗಳಿಗೆ ಸುಂಕ ಮನ್ನಾ ಒದಗಿಸಿ ಮೀನುಗಾರಿಕೆಗೆ ಶಕ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ: ಯಶ್ಪಾಲ್ ಸುವರ್ಣ ಅಭಿನಂದನೆ

Date:

ಉಡುಪಿ, ಜು.25: ಐತಿಹಾಸಿಕ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ ಟಿಎ) ಅಂಕಿತ ಹಾಕುವ ಮೂಲಕ ದೇಶದ ಮೀನುಗಾರಿಕಾ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ಬ್ರಿಟನ್ ವಿಧಿಸುತ್ತಿದ್ದ ಸುಂಕವನ್ನು ರದ್ದು ಮಾಡುವಲ್ಲಿ ವಿಶೇಷ ಮುತುವರ್ಜಿವಹಿಸಿದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.

ಈ ಒಪ್ಪಂದವು ನರೇಂದ್ರ ಮೋದಿ ಯವರ ಜನ ಕೇಂದ್ರಿತ ವ್ಯಾಪಾರ ರಾಜತಾಂತ್ರಿಕತೆಗೆ ಸಾಕ್ಷಿಯಾಗಿದೆ. 95% ಕೃಷಿ ರಫ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡುವ ಮೂಲಕ ನಮ್ಮ ರೈತರಿಗೆ ಮತ್ತು 99% ಸಾಗರ ರಫ್ತುಗಳ ಮೇಲೆ ಶೂನ್ಯ ಸುಂಕದೊಂದಿಗೆ ನಮ್ಮ ಮೀನುಗಾರರಿಗೆ ಪ್ರಯೋಜನವನ್ನು ನೀಡಲಿದೆ.

ಮೀನುಗಾರಿಕಾ ಕ್ಷೇತ್ರಕ್ಕೆ ವಿಶೇಷ ಶಕ್ತಿ ತುಂಬುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ಈ ಒಪ್ಪಂದದ ಮೂಲಕ ಭಾರತದ ಸಾಗರೋತ್ಪನ್ನಗಳಿಗೆ ಬ್ರಿಟನ್ನಿನಲ್ಲಿ ಸುಂಕ ಇರುವುದಿಲ್ಲ.

ಇದರಿಂದಾಗಿ ಭಾರತದ ರಫ್ತುದಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಭಾರತದಿಂದ ರಫ್ತಾಗುವ ಸೀಗಡಿಗೆ ಬ್ರಿಟನ್ನಿನಲ್ಲಿ ಈಗ ಶೇ 4.2ರಿಂದ ಶೇ 8.5ರವರೆಗೆ ತೆರಿಗೆ ಇದೆ. ಒಪ್ಪಂದ ಜಾರಿಗೆ ಬಂದ ಈ ಎಲ್ಲಾ ತೆರಿಗೆ ಶೂನ್ಯವಾಗಲಿದ್ದು ಮೀನುಗಾರಿಕಾ ಉತ್ಪನ್ನಗಳ ರಫ್ತು ಹೆಚ್ಚಳವಾಗಿ ಮೀನುಗಾರಿಕೆ ಅಭಿವೃದ್ಧಿಗೆ ವೇಗ ನೀಡಲಿದೆ.

ದೇಶದ ವ್ಯಾಪಾರ ಕ್ಷೇತ್ರದಲ್ಲಿಯೇ ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕುವ ಮೂಲಕ ದೇಶದ ರೈತರು ಹಾಗೂ ಮೀನುಗಾರಾರಿಗೆ ಆರ್ಥಿಕ ಶಕ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರಕ್ಕೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.6: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ...
error: Content is protected !!