ಉಡುಪಿ, ಮಾ.26: ಮಂಗಳವಾರ ಜಿಲ್ಲೆಯ ಕೆಲವೆಡೆ ಸುರಿದ ಗಾಳಿ ಮಳೆಗೆ ಮನೆಗಳ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಯಡಮೊಗೆ, ಕೆರಾಡಿ, ಬ್ರಹ್ಮಾವರ ತಾಲೂಕಿನ ಶಿರಿಯಾರ, ಗಂದಾಡಿ, ಹೊಸಾಳ, ಉಡುಪಿ ತಾಲೂಕಿನ ಕುಕ್ಕೆಹಳ್ಳಿ, ಕಾರ್ಕಳ ತಾಲೂಕಿನ ಕಾಂತಾವರ, ದುರ್ಗಾ, ಕಸಬಾ, ಮಿಯ್ಯಾರು, ಮುಡಾರು ಗ್ರಾಮಗಳಲ್ಲಿ ಹಾಗೂ ಹೆಬ್ರಿ ತಾಲೂಕಿನ ಕೆಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿವೆ. ಕಾರ್ಕಳದ ಕೆರ್ವಾಶೆ ಗ್ರಾಮದಲ್ಲಿ ವ್ಯಕ್ತಿಯೋರ್ವರ ತೋಟಗಾರಿಕಾ ಬೆಳೆಗೆ ಮಳೆಯಿಂದ ಹಾನಿಯಾಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ: (ಮಿಮೀ ಗಳಲ್ಲಿ)- ಕಾರ್ಕಳ – 3.6, ಕುಂದಾಪುರ- 2.0, ಉಡುಪಿ – 0.8, ಬೈಂದೂರು-3.0, ಬ್ರಹ್ಮಾವರ-5.9, ಕಾಪು-0.8, ಹೆಬ್ರಿ-7.1




By
ForthFocus™