Saturday, October 3, 2026
Saturday, October 3, 2026

ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ: ಉಚಿತ ಆರೋಗ್ಯ ಶಿಬಿರ

ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯ: ಉಚಿತ ಆರೋಗ್ಯ ಶಿಬಿರ

Date:

ಕಟಪಾಡಿ, ಮಾ.24: ಪಾಜಕ ಶ್ರೀ ವಿಶ್ವೇಶತೀರ್ಥ ಮಹಾವಿದ್ಯಾಲಯದ ಎನ್‌,ಎಸ್‌,ಎಸ್‌, ಘಟಕ, ಹಾಗೂ ಜೆ.ಸಿ.ಐ ಕಟಪಾಡಿ, ಇವರ ಸಹಭಾಗಿತ್ವದಲ್ಲಿ ಒಂದು ದಿನದ ರಕ್ತದಾನ ಮತ್ತು ವಿವಿಧ ರೀತಿಯ ಆರೋಗ್ಯ ಶಿಬಿರ ಸಭಾಂಗಣದದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ವಿಜಯ್‌ ಪಿ.ರಾವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಚಿತವಾಗಿ ಇಂತಹ ಅರೋಗ್ಯ ತಪಾಸಣೆ ಕಾರ್ಯಕ್ರಗಳನ್ನು ಮಾಡುವುದರಿಂದ ಅಶಕ್ತರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಇತ್ತೀಚೆಗೆ ರಕ್ತದ ಅವಶ್ಯಕತೆ ಹೆಚ್ಚು ಹೆಚ್ಚು ಇರುವುದರಿಂದ ಅಗತ್ಯವಿರುವ ರೋಗಿಗಳಿಗೆ ಇದರ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು. ಶಿಬಿರದಲ್ಲಿ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ, ಕೀಲೂ, ಮೂಳೆ ತಪಾಸಣೆ, ಮದುಮೇಹ ತಪಾಸಣೆ, ಕಣ್ಣಿನ ತಪಾಸಣೆ ನಡೆಸಲಾಯಿತು. ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಖಜಾಂಚಿ ಲಕ್ಷ್ಮೀನಾರಾಯಣ ಉಪಾಧ್ಯ, ಸದಸ್ಯ ಸುದರ್ಶನ್‌ ರಾವ್‌, ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ. ಗೀತಾ ಎಸ್‌ ಕೋಟ್ಯಾನ್‌, ಉಡುಪಿ ಸಿ.ಎಸ್.ಐ ಲಾಂಬರ್ಡ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಗಣೇಶ್‌ ನಾಯಕ್‌, ಉಡುಪಿ ರಕ್ತನಿಧಿ ಘಟಕ ಅಜ್ಜರಕಾಡು ಇಲ್ಲಿನ ಡಾ. ವೀಣಾ ಕುಮಾರಿ, ಜಿ.ಸಿ.ಐ ಕಟಪಾಡಿ ಅಧ್ಯಕ್ಷೆ ರಂಜಿತಾ ಶೇಟ್‌, ಜೆ.ಸಿ.ಐ ವಲಯ ಸಂಯೋಜಕ ಜೆ.ಸಿ ಪ್ರಶಾಂತ್‌ ಆರ್, ಎಸ್., ಪದವಿ ಕಾಲೇಜು ಸಂಯೋಜಕಿ ರಕ್ಷಿತಾ, ಹಾಗೂ ಕಾಲೇಜಿನ ಎನ್,ಎಸ್‌,ಎಸ್‌ ಘಟಕದ ಕಾರ್ಯಕ್ರಮಾಧಿಕಾರಿ ಪೂಜಾ, ಉಪಸ್ಥಿತರಿದ್ದರು. 170ಕ್ಕೂ ಅಧಿಕ ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು. 62ಯೂನಿಟ್‌ ರಕ್ತ ಸಂಗ್ರಹವಾಗಿದ್ದು, ಜಿಲ್ಲಾ ಆಸ್ಪ್ರತೆಗೆ ಕಳುಹಿಸಿಕೊಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!