ಉಡುಪಿ, ಮಾ.18: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಜೀವನ ಶೈಲಿ ಇಂದು ಮತ್ತು ನಾಳೆ ಬೀದಿ ನಾಟಕ ಸಂಪನ್ನಗೊಂಡಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳುವ ಉದ್ದೇಶದಿಂದ “ಪರಿಸರ ಸ್ನೇಹಿ ಜೀವನ ಶೈಲಿ: ಇಂದು ಮತ್ತು ನಾಳೆ” ಎಂಬ ಬೀದಿ ನಾಟಕವನ್ನು ಉಡುಪಿ ನಗರಸಭೆ, ಸರ್ವಿಸ್ ಬಸ್ ನಿಲ್ದಾಣ ಮತ್ತು ಕೃಷ್ಣ ಮಠದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ನಾಟಕವು ಪರಿಸರದ ಮಹತ್ವ, ಅಜಾಗರೂಕ ಜೀವಶೈಲಿಯ ಪರಿಣಾಮಗಳು ಮತ್ತು ಭವಿಷ್ಯದ ಜಾಗೃತಿಯ ಕುರಿತು ಪ್ರಬಲ ಸಂದೇಶವನ್ನು ನೀಡಿತು. ಇಂದು ನಡೆಯುತ್ತಿರುವ ಪರಿಸರ ನಾಶದ ಚಿತ್ರಣ ಪ್ರದರ್ಶಿಸಲಾಯಿತು. ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ, ನೀರು ಮತ್ತು ವಾಯು ಮಾಲಿನ್ಯ, ಕಸವನ್ನು ಅಸಮರ್ಪಕವಾಗಿ ತ್ಯಜಿಸುವ ಪ್ರಕ್ರಿಯೆಯು ಪ್ರಕೃತಿಗೆ ಹೇಗೆ ಹಾನಿ ಮಾಡುತ್ತಿದೆ ಎಂಬುದನ್ನು ಪ್ರಭಾವಶಾಲಿ ದೃಶ್ಯಗಳ ಮೂಲಕ ತೋರಿಸಲಾಯಿತು. ಈ ನಾಟಕದ ಮೂಲಕ ಜನರಿಗೆ ಪರಿಸರ ಸಂರಕ್ಷಣೆಗಾಗಿ ಜವಾಬ್ದಾರಿಯುತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕೆಂಬ ಸಂದೇಶ ನೀಡಲಾಯಿತು. ಪ್ರೇಕ್ಷಕರು ನಾಟಕವನ್ನು ಉತ್ಸಾಹದಿಂದ ವೀಕ್ಷಿಸಿ, ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು. ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯರಾದ ವಿಜಯ ಕೊಡವೂರು ಪರಿಸರದ ಬಗ್ಗೆ ಮಾತನಾಡಿದರು. ಪರಿಸರ ವಿಭಾಗದ ಇಂಜಿನಿಯರ್ ಸ್ನೇಹ, ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ., ಉಪ ಪ್ರಾಚಾರ್ಯರಾದ ವಿನಾಯಕ ಪೈ, ಇಕೋ ಕ್ಲಬ್ ಸಂಚಾಲಕರಾದ ನಾಗರಾಜ ಗಿಳಿಯಾರು, ಕಾಲೇಜಿನ ಉಪನ್ಯಾಸಕರು, ಇಕೋ ಕ್ಲಬ್ ಪದಾಧಿಕಾರಿಗಳು, ನಗರಸಭೆ ಸದಸ್ಯರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪೂರ್ವ ವಿದ್ಯಾರ್ಥಿ ಗಣೇಶ್ ಸಗ್ರಿ ನಾಟಕವನ್ನು ನಿರ್ದೇಶಿಸಿದರು.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿ ನಾಟಕ
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿ ನಾಟಕ
Date:




By
ForthFocus™