Saturday, February 7, 2026
Saturday, February 7, 2026

ಬಾಳ್ಳಟ್ಟ ಸ್ನೇಹ ಯೂತ್ ಕ್ಲಬ್ ವಾರ್ಷಿಕೋತ್ಸವ​

ಬಾಳ್ಳಟ್ಟ ಸ್ನೇಹ ಯೂತ್ ಕ್ಲಬ್ ವಾರ್ಷಿಕೋತ್ಸವ​

Date:

ಉಡುಪಿ​, ಮಾ.9: ಸ್ನೇಹ ಯೂತ್ ಕ್ಲಬ್ ​ಬಾಳ್ಳಟ್ಟ ಹಿರೇಬೆಟ್ಟು ಇದರ 23ನೇ ವಾರ್ಷಿಕೋತ್ಸವ ಬೊಬ್ಬರ್ಯಕಟ್ಟೆ ಮೈದಾನದಲ್ಲಿ ನಡೆಯಿತು. ಸುಲೋಚನಾ ಹೆಗ್ಡೆ ದೀಪ​ ಬೆಳಗಿಸಿ ಉದ್ಘಾಟಿಸಿದರು. ಯೂತ್ ಕ್ಲಬ್‌ನ ಅಧ್ಯಕ್ಷ ಸುಧಾಕರ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹಾಗೂ ಉಡುಪಿ ಜಿಲ್ಲಾ ಸೌಟ್ ಆಯುಕ್ತ​ ಜನಾರ್ದನ ಕೊಡವೂರು, ಡಾ. ಪ್ರತಿಮಾ ಜಯಪ್ರಕಾಶ ಆಚಾರ್ಯ ಮಾಹೆ ಮಣಿಪಾಲ, 80ನೇ ಬಡಗಬೆಟ್ಟು ಗ್ರಾ.ಪಂ. ಅಧ್ಯಕ್ಷ ಕೇಶವ ಕೋಟ್ಯಾನ್ ಬೊಟ್ಟಿಕಂಬಳ, ಆತ್ರಾಡಿ ಹಿರೇಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಬಾಳ್ಯಟ್ಟ, ಆತ್ರಾಡಿ ಹಿರೇಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಶರತ್ ಹೆಗ್ಡೆ, ವಿನಂತಿ ನಾಯ್ಕ ಕಂಚಿನಬೈಲ್, ಮಾಜಿ ಅಧ್ಯಕ್ಷರಾದ ಸುಬ್ರಾಯ ಆಚಾರ್ಯ, ಅಶೋಕ್ ನಾಯಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ದಿವಂಗತ ಬಾಲಕೃಷ್ಣ ಹಗ್ಡೆ ಅವರ ಸ್ಮರಣಾರ್ಥ ಪುತ್ರ ಸುಜಿತ್ ಕುಮಾರ್ ಹೆಗ್ಡೆ ಅವರು 20 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ದಿವಂಗತ ಜಲಜಾ ವಾಮನ್ ನಾಯಕ್ ಕಾಳಬೆಟ್ಟು ಅವರ ಸ್ಮರಣಾರ್ಥ ಪುತ್ರ ರಮೇಶ್ ನಾಯಕ್ 10 ಮಂದಿಗೆ, ಹಾಗೂ ಯೂತ್ ಕ್ಲಬ್‌ ವತಿಯಿಂದ 61 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಒಟ್ಟು 80 ಸಾವಿರ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಂದೀಪ್ ನಾಯ್ ಕಬ್ಬಾಡಿ ವಾರ್ಷಿಕ ವರದಿ ಮಂಡಿಸಿದರು. ಸುಜಿತ್ ಕುಮಾ‌ರ್ ಹೆಗ್ಡೆ ಸ್ವಾಗತಿಸಿದರು. ದಿನೇಶ್ ಪ್ರಭು ನಿರೂಪಿಸಿ, ಯಜ್ಞನಾಥ ಆಚಾರ್ಯ ವಂದಿಸಿದರು. ಮನೋರಂಜನೆಯ ಕಾರ್ಯಕ್ರಮದಲ್ಲಿ ಲಕುಮಿ ತಂಡ ಮಂಗಳೂರು ಇವರಿಂದ ತುಳು ನಾಟಕ ‘ಒರಿಯಾಂಡಲಾ ಸರಿಬೋಡು’ ಪ್ರದರ್ಶನಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಹೆಮ್ಮಾಡಿ, ಫೆ.7: ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ...

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...
error: Content is protected !!